Connect with us

    BANTWAL

    ಬಂಟ್ವಾಳ – ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಚಾಲಕರಿಗೆ ಗಾಯ

    ಬಂಟ್ವಾಳ ಜೂನ್ 04 : ಎರಡು ಕಾರುಗಳು ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕರಿಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಬೆಂಕ್ಯ ಎಂಬಲ್ಲಿ ನಡೆದಿದೆ.

    ಕಾರು ಚಾಲಕರಾದ ಆದರ್ಶ ಮತ್ತು ಸಂಕಪ್ಪ ಅವರು ಗಾಯಗೊಂಡವರು.ಸಜೀಪ ಮೂಡ ಗ್ರಾಮದ ಬೇಂಕ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಮೀಪದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ‌ಡಿಕ್ಕಿಯಾಗಿದೆ.

    ಮುಡಿಪು ಕಡೆಯಿಂದ ಮತ್ತು ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಕಾರುಗಳ ಮಧ್ಯೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ . ಆದರೆ ಎರಡು ಕಾರಿನಲ್ಲಿ ಕಾರು ಚಾಲಕರು ಮಾತ್ರ ಇದ್ದು , ಅದೃಷ್ಟವಶಾತ್ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ‌ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply