LATEST NEWS
ಬಂಟ್ವಾಳ – ಚೊಚ್ಚಲ ಹೆರಿಗೆ ವೇಳೆ ಮಗು…ಬಳಿಕ ತಾಯಿ ಸಾವು

ಮಂಗಳೂರು: ಮೊದಲ ಹೆರಿಗೆ ಬಳಿಕ ತಾಯಿ ಮಗು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬಂಟ್ವಾಳ ಕಾಲೇಜು ರೋಡ್ ನಿವಾಸಿ ಭವಾನಿ ಶಂಕರ್ ಅವರ ಪತ್ನಿ ಕಾಜಲ್ ಶೆಟ್ಟಿ (25) ಮೃತಪಟ್ಟವರು.
ಬಂಟ್ವಾಳ ತಾಲೂಕಿನ ರಾಮನಗರ ನಿವಾಸಿ ಗರ್ಭಿಣಿ ಕಾಜಲ್ ಅವರನ್ನ ಹೆರಿಗೆಗಾಗಿ ಶನಿವಾರ ರಾತ್ರಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಭಾನುವಾರ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಆದರೆ ಹೆರಿಗೆ ಬಳಿಕ ಮಗು ಸಾವನ್ನಪ್ಪಿತ್ತು.

ಅಧಿಕ ರಕ್ತಸ್ರಾವವಾದ ಕಾರಣ ಕಾಜಲ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ವೈದ್ಯರು ಕಾಜಲ್ ಮಾರ್ಗ ಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇದೀಗ ತಾಯಿ, ಮಗು ಇಬ್ಬರೂ ಮೃತಪಟ್ಟಿದ್ದು, ಪತಿ ಆಘಾತಕ್ಕೊಳಗಾಗಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಆಗಿದೆ ಎಂದು ಆರೋಪಿಸಿದ ಕುಟುಂಬಸ್ಥರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದರು. ಆಸ್ಪತ್ರೆ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.