BANTWAL
ಮುಂದುವರೆದ ಮಳೆ ಅಬ್ಬರ – ಬಂಟ್ವಾಳ ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರದ ಕೊಂಬೆ

ಬಂಟ್ವಾಳ ಮೇ 24 : ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದ ಘಟನೆ ಬಂಟ್ವಾಳದ ಅನಂತಾಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈಗಾಗಲೇ ಕೇರಳಕ್ಕೆ ಮುಂಗಾರುಮಳೆ ಎಂಟ್ರಿಕೊಟ್ಟಿದೆ. ಈ ನಡುವೆ ಮಳೆ ಅಬ್ಬರಕ್ಕೆ ಅಲ್ಲಲ್ಲಿ ಹಾನಿಯುಂಟಾಗಿದೆ.
ಬಂಟ್ವಾಳದ ಅನಂತಾಡಿ ಎಂಬಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದ ಘಟನೆ ನಡೆದಿದ್ದು, ಅಟೋ ಚಾಲಕ ಪ್ರಕಾಶ್ ಅದೃಷ್ಣವಶಾತ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇನ್ನು ಬಿರುಗಾಳಿಯೊಂದಿಗೆ ಸುರಿದ ಭಾರಿ ಮಳೆಯಿಂದಾಗಿ ಬೆಳ್ತಂಗಡಿ ತಾಲ್ಲೂಕಿನ ಪಾರೆಂಕಿ ಗ್ರಾಮದ ಹುಪ್ಪ ಎಂಬಲ್ಲಿ ನಝೀರ್ ಎಂಬುವರ ಮನೆಯ ಪಕ್ಕದ ತಡೆಗೋಡೆ ಶನಿವಾರ ಕುಸಿದು ಬಿದ್ದಿದೆ.
ಇಂದಬೆಟ್ಟು ಗ್ರಾಮದ ಕಜೆ ಎಂಬಲ್ಲಿ ರೋಹಿಣಿ ಎಂಬುವರ ಮನೆಗೆ ರಬ್ಬರ್ ಮರ ಬಿದ್ದು ಹಾನಿಯಾಗಿದೆ. ಅಂಗನವಾಡಿ ಕಟ್ಟಡದ ಚಾವಣಿಯ ಶೀಟ್‌ಗೂ ಹಾನಿಯಾಗಿದೆ.
ಸಾವಿರಾರು ಅಡಿಕೆ ಗಿಡಗಳು, ರಬ್ಬರ್ ಗಿಡಗಳು ಮುರಿದು ಬಿದ್ದಿವೆ. ಮರೋಡಿ ಗ್ರಾಮದಲ್ಲಿ ಬಾವಿಯ ತಡೆಗೋಡೆ ಕುಸಿದಿದೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಹಾಗೂ ಮುಂಡಾಜೆಯಲ್ಲಿ ಮೃತ್ಯುಂಜಯ ನದಿಗಳು ತುಂಬಿ ಹರಿಯುತ್ತಿವೆ.