BANTWAL
ಬಂಟ್ವಾಳ – ಭೀಕರ ರಸ್ತೆ ಅಪಘಾತ ಉದ್ಯಮಿ ರೋಶನ್ ಸೆರಾವೊ ಸಾವು

ಬಂಟ್ವಾಳ ಜೂನ್ 1: ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಚಾಲಕ ಮಡಂತ್ಯಾರಿನ ಕಾಟರಿಂಗ್ ಉದ್ಯಮಿ ರೋಶನ್ ಸೆರಾವೊ ಅವರು ಮೃತಪಟ್ಟಿದ್ದಾರೆ.
ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಸಮೀಪದ ಚಂಡ್ತಿಮಾರ್ ಬಳಿ ಟ್ಯಾಂಕರ್ ಹಾಗೂ ಮಾರುತಿ ಕಾರಿನ ನಡುವೆ ಈ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಎರಡು ವಾಹನಗಳು ನಜ್ಜುಗುತ್ತಾಗಿದ್ದು, ಕಾರಿನ ಚಾಲಕ ಕಾಟರಿಂಗ್ ಉದ್ಯಮಿ ರೋಶನ್ ಸೆರಾವೊ ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.