Connect with us

BANTWAL

ಬಂಟ್ವಾಳ : ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ, ಮನೆಯವರು ಅಪಾಯದಿಂದ ಪಾರು..!

ಭಾನುವಾರ ಸಂಜೆ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಆನೇಕ ಕಡೆ ಸಿಡಿಲು ಗುಡುಗಿನ ಮಳೆಯಾಗಿದ್ದು ಬಂಟ್ವಾಳದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಬಂಟ್ವಾಳ: ಭಾನುವಾರ ಸಂಜೆ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಆನೇಕ ಕಡೆ ಸಿಡಿಲು ಗುಡುಗಿನ ಮಳೆಯಾಗಿದ್ದು ಬಂಟ್ವಾಳದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.


ಬಂಟ್ವಾಳ ಬುಡೋಳಿ ಫಾತಿಮಾ ಸ್ಟೋರ್ ಮಾಲಕ ಸಿದ್ದೀಕ್ ಅವರ ಮನೆಯಂಗಳದಲ್ಲಿ ಇರುವ ತೆಂಗಿನ ಮರಕ್ಕೆ ಸಂಜೆ ಸಿಡಿಲು ಬಡಿದಿದೆ.
ಸಿಡಿಲು ಬಡಿದ ಪರಿಣಾಮವಾಗಿ ತೆಂಗಿನ ಮರದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಹಸಿ ಮರವೇ ಸುಟ್ಟು ಹೋಗಿದೆ.
ಮನೆಯಂಗಳದಲ್ಲಿ ತೆಂಗಿನ ಮರ ಇದೆಯಾದರೂ ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಇದರ ಪಕ್ಕದಲ್ಲೇ ಇವರಿಗೆ ಸೇರಿದ ಅಂಗಡಿ ಕೂಡ ಇದೆಯಾದರೂ ಯಾವುದೇ ಅವಘಡ ಸಂಭವಿಸಿಲ್ಲ.
ಸಿಡಿಲು ಬಡಿದ ಕೂಡಲೇ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಕಂಡ ರಿಕ್ಷಾ ಚಾಲಕರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *