LATEST NEWS
ಬ್ಯಾಂಕ್ ಇನ್ನು ವಾರದಲ್ಲಿ 5 ದಿನ ಮಾತ್ರ…ಶೀಘ್ರದಲ್ಲೇ ಆದೇಶ…!!
ನವದೆಹಲಿ ಮಾರ್ಚ್ 09: ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದ್ದು, ಶೇಕಡ 17 ರಷ್ಟು ವೇತನ ಹೆಚ್ಚಳದ ಜೊತೆಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ನಿರ್ವಹಿಸುವ ಆದೇಶ ಶೀಘ್ರದಲ್ಲೇ ಜಾರಿಯಾಗಲಿದೆ.
ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಶುಕ್ರವಾರ ಶೇ. 17 ರಷ್ಟು ವಾರ್ಷಿಕ ವೇತನ ಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ.ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ವಾರ್ಷಿಕವಾಗಿ ಸುಮಾರು 8,284 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
ನವೆಂಬರ್ 2022 ರಿಂದ ಜಾರಿಗೆ ಬರಲಿರುವ ವೇತನ ಹೆಚ್ಚಳದಿಂದ ಸುಮಾರು 8 ಲಕ್ಷ ಬ್ಯಾಂಕ್ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೇ ಸರ್ಕಾರಿ ಅಧಿಸೂಚನೆಗೆ ಬಾಕಿಯಿರುವ ಎಲ್ಲಾ ಶನಿವಾರಗಳನ್ನು ರಜೆಯೆಂದು ಗುರುತಿಸುವ ಜಂಟಿ ಟಿಪ್ಪಣಿಯನ್ನು ಒಪ್ಪಿಕೊಳ್ಳಲಾಗಿದೆ. ಪರಿಷ್ಕೃತ ಕೆಲಸದ ಸಮಯವು ಸರ್ಕಾರದ ಅಧಿಸೂಚನೆಯ ನಂತರ ಜಾರಿಗೆ ಬರಲಿದೆ ಎಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಐಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮೆಹ್ತಾ, ಯುಎಫ್ ಬಿಯು ಮತ್ತಿತರು ಬ್ಯಾಂಕ್ ನೌಕರರು ಸಂಘಗಳು ವೇತನ ಪರಿಷ್ಕರಣೆ ಕುರಿತ 9ನೇ ಜಂಟಿ ಟಿಪ್ಪಣಿ ಮತ್ತು 12 ದ್ವಿಪಕ್ಷೀಯ ಇತ್ಯರ್ಥ ಮತ್ತು ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಪರಿಷ್ಕೃತ ವೇತನಕ್ಕೆ ಸಹಿ ಹಾಕಿರುವುದರಿಂದ ಇದು ಬ್ಯಾಂಕಿಂಗ್ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದ್ದಾರೆ.