LATEST NEWS
ಸಿನೆಮಾದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಪಾತ್ರ ಮಾಡಿದ್ದಕ್ಕೆ ನಟಿ ಅರೆಸ್ಟ್…!!

ಢಾಕಾ ಮೇ 18: ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನ ಚರಿತ್ರೆ ಆಧಾರಿತ ‘ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ ನಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಪಾತ್ರವನ್ನು ನಿರ್ವಹಿಸಿದ್ದ ನುಸ್ರತ್ ಫರಿಯಾ (31) ಅವರನ್ನು ಭಾನುವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ (2024) ಜುಲೈನಲ್ಲಿ ಶೇಕ್ ಹಸೀನಾ ವಿರುದ್ಧದ ಸಾಮೂಹಿಕ ದಂಗೆಯ ಸಂದರ್ಭದಲ್ಲಿನ ಕೊ*ಲೆ ಯತ್ನ ಪ್ರಕರಣ ಸಂಬಂಧ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಥೈಲ್ಯಾಂಡ್‌ಗೆ ತೆರಳುತ್ತಿದ್ದಾಗ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ. ಸರ್ಕಾರದ ವಿರುದ್ದ ಸಾಮೂಹಿಕ ದಂಗೆ ಎದ್ದಿದ್ದ ಸಂದರ್ಭದಲ್ಲಿ ಕೊ*ಲೆ ಯತ್ನದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಿಯಾ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿತ್ತು.