KARNATAKA
ಬೆಂಗಳೂರು: ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

ಬೆಂಗಳೂರು, ಅಕ್ಟೋಬರ್ 24: ದೀಪಾವಳಿಯ ದಿನ ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊದಲು, ಡಿವೈಡರ್ಗೆ ಡಿಕ್ಕಿ ಹೊಡೆದು, ಬಳಿಕ ಫ್ಲೈಓವರ್ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.
ಆಂಧ್ರಪ್ರದೇಶ ಮೂಲದ ನಾಗಾರ್ಜುನ (33) ಮೃತ ದುರ್ದೈವಿ. ನಾಗಾರ್ಜುನ ಬೆಂಗಳೂರಿನಿಂದ ಹೊಸೂರು ಕಡೆ ಹೊರಟಿದ್ದ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಾಗಾರ್ಜುನ ಬೈಕ್ ನಲ್ಲಿ ಹೋಗ್ತಿದ್ದ ವೇಳೆ ಯಾವ ದಿಕ್ಕಿಗೆ ಹೋಗಬೇಕು ಎಂದು ಗೊಂದಲ ಉಂಟಾಗಿ, ಬೈಕ್ ಕಂಟ್ರೋಲ್ ಗೆ ಬಾರದೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯ BETPL ನಿರ್ವಹಣೆಯಲ್ಲಿರುವ ಫ್ಲೈಓರ್ ಇದಾಗಿದೆ. ಬೆಳಗ್ಗೆ 11.45ರಲ್ಲಿ ಈ ದುರಂತ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಸೇಂಟ್ ಜಾನ್ಸ್ ಆಸ್ಪತ್ರೆ ಗೆ ರವಾನೆ ಮಾಡಿದ್ದಾರೆ.