UDUPI
ಕೊರೊನಾ ಸಂಕಷ್ಟ ನಡುವೆ ಸಂಭ್ರಮದ ಬಕ್ರೀದ್ ಹಬ್ಬ
ಉಡುಪಿ ಜು.31: ಕರಾವಳಿಯ ಮುಸಲ್ಮಾನರಿಗೆ ಇಂದು ಬಕ್ರೀದ್ ಹಬ್ಬ. ಸಾಂಕ್ರಾಮಿಕ ಕೋರೋನ ಹರಡಿರುವುದರಿಂದ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ಮುಸಲ್ಮಾನರು ಆಚರಿಸಿದ್ದಾರೆ. ಮಸೀದಿಗಳಲ್ಲಿ ಬೆಳಗ್ಗೆ ನಮಾಜ್ ನಡೆದಿದ್ದು, ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರತಿ ಮಸೀದಿಯಲ್ಲೂ ಕೂಡ ಇದೇ ಷರತ್ತು ಅನ್ವಯ ಆಗಿದೆ. ನಮಾಜ್ ಗೆ ಮಾತ್ರ ಅವಕಾಶ ಕಲ್ಪಿಸಿರುವ ಕಮಿಟಿ, ನಮಾಜ್ ನಂತರ ಆಲಿಂಗನಕ್ಕೆ ಅವಕಾಶ ಕೊಟ್ಟಿಲ್ಲ. ಐವತ್ತಕ್ಕಿಂತ ಹೆಚ್ಚು ಜನ ಮಸೀದಿಗೆ ಆಗಮಿಸಿದರೆ ಎರಡು ಬ್ಯಾಚ್ ಗಳಲ್ಲಿ ನಮಾಜ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಮತ್ತು ವೃದ್ಧರಿಗೆ ಯಾವುದೇ ಕಾರಣಕ್ಕೂ ಬಕ್ರೀದ್ ನಮಾಜ್ ಗೆ ಮಸೀದಿಗೆ ಪ್ರವೇಶ ಇರಲಿಲ್ಲ.
ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿ, ಹಬ್ಬವನ್ನು ಆಚರಿಸುವಂತೆ ಧರ್ಮಗುರುಗಳು ಆಯಾಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆಯೇ ಕರೆ ಕೊಟ್ಟಿದ್ದರು. ಈ ಹಿಂದೆ ಮುಸಲ್ಮಾನರ ರಂಜಾನ್ ಹಬ್ಬದ ಸಂಭ್ರಮಕ್ಕೂ ಕೊರೋನಾ ಅಡ್ಡ ಬಂದಿತ್ತು.