Connect with us

LATEST NEWS

ರಾಮಮಂದಿರ ಶಿಲಾನ್ಯಾಸಕ್ಕೆ ಪ್ರವೀಣ್ ತೊಗಾಡಿಯಾರನ್ನು ಆಹ್ವಾನಿಸದಿರುವುದು ನೋವು ತಂದಿದೆ

ಉಡುಪಿ ಜುಲೈ 31: ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಭೂಮಿ ಪೂಜೆಗೆ ವಿಎಚ್ ಪಿಯ ಮಾಜಿ ಮುಖಂಡ ಪ್ರವೀಣ್ ತೊಗಾಡಿಯರನ್ನು ಆಹ್ವಾನಿಸದಿರುವುದು ನೋವು ತಂದಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ರಾಮಜನ್ಮಭೂಮಿ ಹೋರಾಟಕ್ಕಾಗಿ ಪ್ರವೀಣ್ ತೊಗಾಡಿಯಾ ನಿರಂತರ ಹೊರಾಟ ನಡೆಸಿದ್ದಾರೆ. ಸಂಸಾರ ದೂರವಿಟ್ಟು 32 ವರ್ಷ ತ್ಯಾಗದ ಜೀವನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು ಇದು ಲಕ್ಷಾಂತರ ಹಿಂದೂಗಳ ತುಡಿತವಾಗಿದ್ದು, ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಆಹ್ವಾನಿಸಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯಾ ಹೋರಾಟಕ್ಕೆ ಹೊಸ ಹುರುಪು ಬಂದಿದ್ದು, ರಾಮ ಮಂದಿರ ಶಿಲಾನ್ಯಾಸ ಜಗತ್ತಿನ ಇತಿಹಾಸದ ಪುಟ ಸೇರಲಿದೆ. ರಾಮಮಂದಿರಕ್ಕಾಗಿ ಜೀವ ತ್ಯಾಗ ಮಾಡಿದ ಲಕ್ಷಾಂತರ ಜನರ ಬಲಿದಾನದ ಫಲ ಸಿಗುತ್ತಿದೆ ಎಂದರು.


ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿರುವವರ ವಿರುದ್ದ ಕಿಡಿಕಾರಿದ ಮುತಾಲಿಕ್ ನೀವು ಸಂವಿಧಾನ ವಿರೋಧಿಗಳು, ನೀವು ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದೀರಿ, ಇನ್ನು ಯಾರೇ ವಿರೋಧಿಸಿದರು ನ್ಯಾಯಾಂಗನಿಂದನೆ ಆಗುತ್ತೆ ಎಂದ ಅವರು ಕಾಂಗ್ರೆಸ್, ಕಮ್ಯುನಿಸ್ಟ್ ನವರು ಅಜ್ಮೀರ್ ದರ್ಗಾಗೆ ಹೋಗಲ್ವಾ, ದರ್ಗಾಗೆ ಚಾದರ ಹೊದಿಸಿ ಬರುವುದಕ್ಕೆ ತೊಂದರೆ ಇಲ್ವಾ, ಸಿದ್ದರಾಮಯ್ಯ ಟಿಪ್ಪುವಿನ ವೇಷಹಾಕಿ ಖಡ್ಗ ಹಿಡಿದುಕೊಳ್ಳಬಹುದು. ಪ್ರಧಾನಿ ಶಿಲಾನ್ಯಾಸ ಮಾಡುವುದನ್ನು ವಿರೋಧಿಸುವುದು ಶತ ಮೂರ್ಖತನ ಎಂದರು.

Facebook Comments

comments