LATEST NEWS
ಬೇಕರಿ ಓವನ್ ಸ್ಪೋಟ ಬೇಕರಿ ಮಾಲೀಕ ಸಾವು

ಉಡುಪಿ ಅಗಸ್ಟ್ 10: ಬೇಕರಿ ಉತ್ಪನ್ನಗಳ ತಯಾರಿಸುವ ಘಟಕದಲ್ಲಿ ನಡೆದ ಓವನ್ ಸ್ಪೋಟದಿಂದ ಬೇಕರಿ ಮಾಲೀಕ ಧಾರುಣವಾಗಿ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಾಬುಕಳದಲ್ಲಿ ನಡೆದಿದೆ. ಮೃತರನ್ನು ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ (53) ಎಂದು ಗುರುತಿಸಲಾಗಿದೆ.
ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕ ರುಚಿ ಪ್ಯಾಕ್ಟರಿಯಲ್ಲಿ ದೊಡ್ಡ ಗಾತ್ರದ ಓವನ್ ಸ್ಪೋಟದಿಂದ ಈ ಅವಘಡ ಸಂಭವಿಸಿದ್ದು , ಬೇಕರಿಯ ಮಾಲೀಕ ರಾಬರ್ಟ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇವರು ಓವನ್ ನ ನಿರ್ವಹಣೆ ಗೆಂದು ಸಮೀಪಕ್ಕೆ ತೆರಳಿದಾಗಲೇ ಓವನ್ ಸ್ಪೋಟಗೊಂಡಿದ್ದು, ಓವನ್ ನ ಬಾಗಿಲು ಬಡಿದು ದೇಹ ಸಂಪೂರ್ಣ ಛಿದ್ರವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳಕ್ಕೆ ಕೋಟ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.