Connect with us

    KARNATAKA

    ಬಜರಂಗದಳ ನಿಷೇಧ ಪ್ರಸ್ತಾಪ: ಕಾಂಗ್ರೆಸ್‌ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿದ ಕೆ.ಎಸ್‌ ಈಶ್ವರಪ್ಪ

    ಕಲಬುರಗಿ, ಮೇ 04: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಭರವಸೆಯನ್ನು ನೀಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

    ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಒಂದು ಹೆಜ್ಜೆ ಮುಂದೆ ಹೋಗಿ  ಕಾಂಗ್ರೆಸ್​ನ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​​ನದ್ದು ರಾಷ್ಟ್ರ ದ್ರೋಹಿ ಪ್ರಣಾಳಿಕೆ. ಕಾಂಗ್ರೆಸ್​​ ಕೂಡಲೇ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು . ಕಾಂಗ್ರೆಸ್​ ಸರ್ಕಾರ PFI ಮೇಲಿದ್ದ 173 ಪ್ರಕರಣ​ ಹಿಂಪಡೆದಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್​ ಬೆಂಬಲ ನೀಡಿತ್ತು.

    ದೇಶದಲ್ಲಿ PFI ಬ್ಯಾನ್ ಆಗಿದೆ ಎನ್ನುವುದೇ ಕಾಂಗ್ರೆಸ್​ಗೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ರಾಷ್ಟ್ರದ್ರೋಹಿ ಸಂಘಟನೆಯನ್ನು ಬ್ಯಾನ್ ಮಾಡಿದೆ. ಭಜರಂಗದಳ ಮುಟ್ಟಿದ್ದರಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ. ವಿಪಕ್ಷ ಸ್ಥಾನ ಪಡೆಯುವಷ್ಟು ಸ್ಥಾನವನ್ನೂ ಕಾಂಗ್ರೆಸ್​ ಗೆಲ್ಲುವುದಿಲ್ಲ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *