LATEST NEWS
ವಿಪಕ್ಷ ಸ್ಥಾನದಿಂದ ಆರ್ ಅಶೋಕ್ ಕೆಳಗಿಳಿಸಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೆ ಬಜರಂಗದಳ ಮನವಿ

ಮಂಗಳೂರು ಫೆಬ್ರವರಿ 23 : ವಿಧಾನಸಭೆ ಅಧಿವೇಶನ ಸಂದರ್ಭ ಬಜರಂಗದಳ ಕಾರ್ಯಕರ್ತ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂಬ ಹೇಳಿಕೆ ಖಂಡಿಸಿ ಇದೀಗ ಬಜರಂಗದಳ ವಿಪಕ್ಷ ನಾಯಕ ಸ್ಥಾನದಿಂದ ಆರ್.ಅಶೋಕ್ ಅವರನ್ನು ಕೆಳಗಿಳಿಸಬೇಕು ಎಂದು ಬಜರಂಗದಳವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿದೆ.
ಅಶೋಕ್ ಅವರು ವಿಧಾನ ಸಭೆ ಅಧಿವೇಶನದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎನ್ನುವ ಮೂಲಕ ಸಂಘಟನೆಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು, ಅವರನ್ನು ತತ್ ಕ್ಷಣ ವಿಪಕ್ಷ ನಾಯಕ ಸ್ಥಾನದಿಂದ ಇಳಿಸಬೇಕು, ಅವರು ಕೂಡಲೇ ರಾಜ್ಯದ ಹಿಂದೂ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಅವರು ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಬಜರಂಗದಳ ಮುಖಂಡರು ”ಅಡ್ಜಸ್ಟ್ ಮೆಂಟ್ ಅಶೋಕ್” ಎಂದು ಹೆಸರು ಬದಲಾಯಿಸಿ ಎಂದು ಆಕ್ರೋಶ ಹೊರ ಹಾಕಿ ದ್ದಾರೆ. ಸಂಘಪರಿವಾರದ ಹಲವು ಕಾರ್ಯಕರ್ತರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.
