DAKSHINA KANNADA
ಬೈತಡ್ಕ ಕಾರು ದುರಂತ: ನಾಪತ್ತೆಯಾದ ಯುವಕರಲ್ಲಿ, ಒಬ್ಬ ವ್ಯಕ್ತಿಯ ಶವ ಪತ್ತೆ

ಕಾಣಿಯೂರು, ಜುಲೈ 12: ಕಳೆದ ಜುಲೈ10 ರಂದು ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಯುವಕರು ನೀರುಪಾಲಗಿದ್ದರು.
ಜು.10ರಂದೇ ಮಧ್ಯಾಹ್ನ ಕಾರು ಪತ್ತೆಯಾಗಿತ್ತು. ಆದರೆ ನಾಪತ್ತೆಯಾದ ಯುವಕರ ಸುಳಿವಿರಳಿಲ್ಲ, ಕಳೆದೆರಡು ದಿನಗಳ ತೀವ್ರ ಶೋಧದ ಬಳಿಕ ಇಂದು ಬೆಳಿಗ್ಗೆ 8 ಗಂಟೆ ಸಮೀಪ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ.

ಮೃತದೇಹವು ಊರಿನವರಿಗೆ ಸಿಕ್ಕಿದ್ದು, ಇಲಾಖೆಯವರು ಆಗಮಿಸಿದ ನಂತರ ಮೇಲೆತ್ತಲಾಗುತ್ತದೆ. ಮೃತದೇಹದ ಅಂಗಿ ಕಳಚ್ಚಿದ್ದು, ಪ್ಯಾಂಟ್ ಧರಿಸಿದ ರೀತಿ ಕವುಚಿ ಮರದಲ್ಲಿ ನೇತಾಡುತ್ತಿದೆ. ಮಳೆ ಕಡಿಮೆಯಾದ ಕಾರಣ ಮೃತದೇಹ ಪತ್ತೆಯಾಗಿದೆ.