KARNATAKA
ಚಾರ್ಮಾಡಿ ಘಾಟ್ನಲ್ಲಿ ಹೊತ್ತಿ ಉರಿದ ಕಾರು
ಚಿಕ್ಕಮಗಳೂರು, ಜುಲೈ 12: ಇಂದು ಮುಂಜಾನೆ ಚಾರ್ಮಾಡಿ ಘಾಟ್ನಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಮಳೆಯ ಮಧ್ಯೆಯೂ ಕಾರೊಂದು ಚಾರ್ಮಾಡಿ ಘಾಟ್ನಲ್ಲಿ ಹೊತ್ತಿ ಉರಿದಿದೆ.
ಮೂಡಿಗೆರೆ ತಾಲೂಕಿನ ಜೇನ್ ಕಲ್ ದೇವಸ್ಥಾನದ ಬಳಿ ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಕುಟುಂಬವೊಂದು ಕಾರಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು.
ಚಾರ್ಮಾಡಿ ಘಾಟ್ ನಲ್ಲಿ ತೆರಳುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ನಾಲ್ವರು ಕಾರಿನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login