Connect with us

    LATEST NEWS

    ಹೆಣ್ಣು ಮಗುವಿಗೆ 3 ಲಕ್ಷ ಗಂಡು ಮಗುವಿಗೆ 6 ಲಕ್ಷ – ಮಗು ಮಾರಾಟದ ಖದೀಮ ಆರೆಸ್ಟ್

    ಮಂಗಳೂರು ಮಾರ್ಚ್ 5: ಕಾನೂನು ಬಾಹಿರವಾಗಿ ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುಲ್ಕಿ ನಿವಾಸಿ ರಾಯನ್ (30) ಎಂದು ಗುರುತಿಸಲಾಗಿದ್ದು, ಇತ ಫ್ಯಾನ್ಸಿ ಸ್ಟೋರ್ ಹಾಗೂ ಚಿಕನ್ ಸ್ಟಾಲ್ ನಡೆಸುವುದರ ಜೊತೆಗೆ ಹಸುಗೂಸುಗಳ ಮಾರಾಟ ಕೃತ್ಯದಲ್ಲಿಯೂ ತೊಡಗಿದ್ದಾನೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.


    ಆರೋಪಿ ಹಾಸನ ಮೂಲದ ಕುಟುಂಬವೊಂದರಿಂದ ಹೆಣ್ಣು ಮಗುವನ್ನು ಮೂರು ಲಕ್ಷಕ್ಕೆ ಖರೀದಿ ಕಾರ್ಕಳ ಮೂಲದ ಕವಿತಾ ಎಂಬವರಿಗೆ ಆರು ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದು, ಮೈಸೂರು ಮೈಸೂರು ಮೂಲದ ಒಡನಾಡಿ ಎಂಬ ಸಂಸ್ಥೆಯ ಮಾಹಿತಿ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ‌ ರಾಯನ್, ಹೆಣ್ಣು ಮಗುವಿಗೆ 3 ಲಕ್ಷ ರೂ, ಗಂಡು ಮಗುವಿಗೆ 6 ಲಕ್ಷ ರೂ. ದರ ನಿಗದಿಪಡಿಸಿ ಒಂದೂವರೆ ಲಕ್ಷ ರೂ. ಟೋಕನ್ ಹಣ ನೀಡಿದ್ದಲ್ಲಿ 15 ದಿವಸಗಳೊಳಗೆ ಮಗು ಒದಗಿಸಿಕೊಡುತ್ತಾನೆ. ಈ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ತನಿಖೆ ಮಾಡಲಾರಂಭಿಸಿದ್ದೇವೆ ಎಂದರು.

    ನಿನ್ನೆ ರಾಯನ್ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಒಡನಾಡಿ ಸಂಸ್ಥೆಯ ನೆರವಿನೊಂದಿಗೆ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ತನಿಖೆಯ ವೇಳೆ ಆತ ಈ ಸಂಸ್ಥೆಯ ಸಿಬ್ಬಂದಿ ಜೊತೆಗೆ ಸೇರಿ ಸಾಕಷ್ಟು ಮಕ್ಕಳನ್ನು ಮಾರಾಟ ಮಾಡಿದ್ದೇನೆಂದು ಬಾಯ್ಬಿಟ್ಟಿದ್ದಾನೆ. ಅಲ್ಲದೇ, ಮಗು ಪಡೆದುಕೊಂಡವರನ್ನೂ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *