LATEST NEWS
ಉಡುಪಿ – ಹೆತ್ತವರಿಗೆ ಬೇಡವಾಗಿ ಕಸದಬುಟ್ಟಿಯಲ್ಲಿದ್ದ ಕಂದಮ್ಮನಿಗೆ ನಾಕರಣ ಶಾಸ್ತ್ರ
ಉಡುಪಿ ನವೆಂಬರ್ 26: ಹೆತ್ತವರಿಗೆ ಬೇಡವಾಗಿ ಕಸದತೊಟ್ಟಿಯಲ್ಲಿ ಬಿದ್ದಿದ್ದ ಕಂದಮ್ಮನಿಗೆ ಉಡುಪಿಯಲ್ಲಿ ನಾಮಕರಣ ಸಂಭ್ರಮ. ಉಡುಪಿಯ ಸಂತೆಕಟ್ಟೆಯ ಕೃಷ್ಣಾನುಗ್ರಹ ಸಂಸ್ಥೆಯಲ್ಲಿ ಈ ನಾಮಕರಣ ಸಂಭ್ರಮವನ್ನು ನಡೆಯಲಾಗಿತ್ತು. ಬಲೂನುಗಳಿಂದ ಸಿಂಗಾರಗೊಂಡಿದ್ದ ತೊಟ್ಟಿಲಲ್ಲಿ ಮೂರು ತಿಂಗಳ ಹಸುಗೂಸು ನಲಿಯುತ್ತಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ ಅವರು ಮುಂದೆ ನಿಂತು ಶಾಸ್ತ್ರೋಕ್ತವಾಗಿ ನಾಮಕರಣ ನೆರವೇರಿಸಿದರು. ಕಂದಮ್ಮನ ಭವಿಷ್ಯ ದೀಪದಂತೆ ಸದಾ ಪ್ರಜ್ವಲಿಸಲಿ ಎಂದು ‘ಪ್ರಜ್ವಲ’ ಎಂಬ ಹೆಸರನ್ನಿಟ್ಟು ಹರಸಿದರು.
ಹೀಗೆ ಮಮತೆಯ ತೊಟ್ಟಿಯಲ್ಲಿ ಹಾಯಾಗಿ ಇರೋ ಮಗು ಮೂರು ತಿಂಗಳ ಹಿಂದೆ ಕಸದ ತೊಟ್ಟಿಯಲ್ಲಿ ಅನಾಥವಾಗಿ ಆಳುತ್ತಾ ಬಿದ್ದಿತ್ತು. ಹತ್ತಬ್ಬೆ ಬೇಡವಾಯ್ತೋ ಅಥವಾ ಸಮಾಜಕ್ಕೆ ಅಂಜಿ ಬಿಟ್ಟಿದಳ್ಳೋ ಗೊತ್ತಿಲ್ಲ. ಆದ್ರೆ ಉಡುಪಿ ಹೋಟೆಲ್ ಮುಂಭಾಗ ಇಟ್ಟಿರುವ ಕಸದ ಡಬ್ಬದಲ್ಲಿ ಈ ಪುಟ್ಟ ಮಗು ಆಳುತ್ತಾ ಬಿದ್ದಿತ್ತು. ಬೆಳಗ್ಗೆ ಕಸ ಗುಡಿಸುವ ಯುವಕನಿಗೆ ಆಳುವ ಕಂದಮ್ಮನ ಕೂಗು ಕೇಳಿ ಹೋಗಿ ನೋಡಿದ ,ಆಗಷ್ಟೇ ಹುಟ್ಟಿದ ಮಗು ಬುಟ್ಟಿಯೊಳಗಡೆ ಅಮ್ಮನ ಎದೆ ಹಾಲಿಗಾಗಿ ರೋದಿಸುತ್ತಿತ್ತು. ಆದ್ರೆ ತಾಯಿ ಮಾತ್ರ ಮಗುವನ್ನು ಅನಾಥೆ ಮಾಡಿ ಹೋರಟು ಹೋಗಿದ್ದಳು..
ಕಸ ಆಯುವ ಆತನಿಗೆ ಮುಂದೇನು ಮಾಡುವುದು ಅಂತ ಗೋತ್ತಾಗದೇ ಕೂಡಲೇ ಸಾಮಾಜಿಕ ಕಾರ್ಯಕರ್ತರ ನಿತ್ಯಾನಂದ ವಳಕಾಡ್ ಅವರಿಗೆ ತಿಳಿಸುತ್ತಾನೆ, ಕೂಡಲೇ ಸ್ಥಳಕ್ಕೆ ಬಂದ ಅವರು ಇದೇ ಮಗುವನ್ನು ಕಸದ ತೊಟ್ಟಿಯಿಂದ ತೆಗೆದು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತ್ರ ಉಡುಪಿ ಸಮೀಪದಲ್ಲೇ ಇರುವ ಕೃಷ್ಣಾನುಗ್ರಹ ಅನಾಥ ಮಕ್ಕಳು ದತ್ತು ಸ್ವೀಕಾರ ಸಂಸ್ಥೆಗೆ ನೀಡಿದ್ರು, ತನ್ನವರು ಇಲ್ಲದಿದ್ದರೂ ತನಂತೆ ಅನಾಥವಾಗಿರುವ ಇತರೆ ಮಕ್ಕಳ ಜೊತೆಗೆ ಬೆಳೆಯಿತು. ಮುದ್ದಾಗಿ ಬೆಳೆಯಿತು. ಇದೀಗ ಮಗುವಿಗೆ ಪ್ರಜ್ವಲ ಎಂದು ಹೆಸರಿಡಲಾಗಿದ್ದು ,ಮಗುವಿನ ಜೀವನ ಸದಾ ದೀಪದಂತೆ ಪ್ರಜ್ವಲಿಸಲು ಎಂದು ಈ ಸಂದರ್ಭ ಹಾರೈಸಲಾಯಿತು.
ಈ ನಾಮಕರಣದಲ್ಲಿ ಮಗುವಿನ ಪೋಷಕರು ಇರಲಿಲ್ಲ ಎಂಬ ಕೊರತೆ ಬಿಟ್ಟರೆ ಉಳಿದೆಲ್ಲವೂ ಇತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೃಷ್ಣ ಚಾರಿಟೆಬಲ್ ಟ್ರಸ್ಟ್, ಪೊಲೀಸ್ ಇಲಾಖೆ, ನಾಗರಿಕ ಸೇವಾ ಸಮಿತಿ, ಮಕ್ಕಳ ಸಹಾಯವಾಣಿ, ಹೀಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳು ಮಗುವಿನ ‘ಬಂಧುಗಳ’ ಸ್ಥಾನದಲ್ಲಿ ನಿಂತು ತೊಟ್ಟಿಲು ಶಾಸ್ತ್ರ ನೆರವೇರಿಸಿದರು.