Connect with us

LATEST NEWS

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ – ಶಾಸಕ ಕಾಮತ್

ಮಂಗಳೂರು : ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ ಈ ಭಾಗದ ಜನರ ಬಹುಕಾಲದ‌ ಕನಸು ಈಡೇರಿಸಿದಂತಾಗಿದೆ ಎಂದು ಶಾಸಕ‌ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ನಾನು ಶಾಸಕನಾಗಿ ಆಯ್ಕೆಯಾದ ಪ್ರಾರಂಭದ ದಿನಗಳಲ್ಲಿ ನಾಲ್ಯಪದವಿನಲ್ಲಿ ಪದವಿಪೂರ್ವ ಕಾಲೇಜು ಸ್ಥಾಪನೆಯ ಕುರಿತು ಸಾರ್ವಜನಿಕರ ಜೊತೆ ಚರ್ಚಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ. ಆ ಬಳಿಕ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರಲ್ಲಿ ಈ ವಿಚಾರವಾಗಿ ಚರ್ಚಿಸಿ ಕಾಲೇಜು ಸ್ಥಾಪನೆಗೆ ಕೋರಿದ್ದೆ. ಇಂದು ಸರಕಾರವು ಆದೇಶ ಸಂಖ್ಯೆ ಇಪಿ 216 ಎಸ್ಎಚ್ಎಚ್ 2020 ಪ್ರಕಾರ ಕಾಲೇಜು ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿದ್ದು,ಇದಕ್ಕಾಗಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳಿಗೂ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

 

ಶಕ್ತಿನಗರ ಪರಿಸರದ ವಿಧ್ಯಾರ್ಥಿಗಳು ತಮ್ಮ ಕಾಲೇಜು ಶಿಕ್ಷಣಕ್ಕಾಗಿ ನಗರಕ್ಕೆ ಬರಬೇಕಿತ್ತು. ಈ ಪರಿಸರದ‌ ಜನರ ಬೇಡಿಕೆಯನ್ನು ಈಡೇರಿಸುವ‌ ಪ್ರಯತ್ನಕ್ಕೆ ಇಂದು ಫಲ ದೊರೆತಿದೆ. ಒಬ್ಬ ಶಾಸಕನಾಗಿ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ ನೆಮ್ಮದಿ ಇದೆ. ಇನ್ನು ಮುಂದಿನ ದಿನಗಳಲ್ಲಿ ಈ ಭಾಗದ ವಿಧ್ಯಾರ್ಥಿಗಳು ಶಕ್ತಿನಗರದಲ್ಲೇ ತಮ್ಮ ಪದವಿ ವಿಧ್ಯಾಭ್ಯಾಸ ಮುಂದುವರಿಸಬಹುದು. ಸದ್ಯ ಈಗ ನಾಲ್ಯಪದವಿನಲ್ಲಿರುವ ಶಾಲಾ ಕಟ್ಟಡದಲ್ಲೇ ಕಾಲೇಜು ತರಗತಿ ಪ್ರಾರಂಭಿಸಲಾಗುವುದು. ಇನ್ನು ಮುಂದಿನ ದಿನಗಳಲ್ಲಿ ಕಾಲೇಜಿಗೆ ಹೊಸತಾದ ಕಟ್ಟಡ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗುವುದು ಎಂದು ಶಾಸಕ ‌ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.