LATEST NEWS
ಮನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ

ಉಡುಪಿ ಎಪ್ರಿಲ್ 19: ಒಂದು ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿಯನ್ನು ರಕ್ಷಿತಾ (22) ಎಂದು ಗುರುತಿಸಲಾಗಿದ್ದು, ಈಗ ಉದ್ಯಾವರದ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇ.ಎಮ್.ಎಸ್ ಕಲಿಯುತ್ತಿದ್ದರು. ವಾರದ ಹಿಂದೆ ಅಂತಿಮ ವರ್ಷದ ಬಿ.ಇ.ಎಮ್.ಎಸ್ ವ್ಯಾಸಂಗ ಮುಗಿಸಿ ಮನೆಗೆ ಬಂದಿದ್ದ ಇವರು ಬಿ.ಇ ಎಮ್.ಎಸ್ ಅಂತಿಮ ವರ್ಷದ ಫಲಿತಾಂಶವನ್ನು ಆನ್ ಲೈನ್ ನಲ್ಲಿ ನೋಡಿದ್ದಳು. ಅದರಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದು, ಇದೇ ವಿಷಯಕ್ಕೆ ಮನನೊಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
