Connect with us

  LATEST NEWS

  ಅಯೋಧ್ಯೆ ರಾಮಲಲ್ಲಾನಿಗೆ ಕೆನರಾ ಹೈಸ್ಕೂಲ್ ವಿದ್ಯಾರ್ಥಿನಿ ನಿಮಿಷಾ ಶೆಣೈ ಭರತನಾಟ್ಯ ಸೇವೆ

  ಅಯೋಧ್ಯೆ ಫೆಬ್ರವರಿ 09: ಮಂಗಳೂರಿನ ಕೆನರಾ ಹೈಸ್ಕೂಲಿನ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಮಿಷಾ ಶೆಣೈ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಫೆಬ್ರವರಿ 7 ರಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಪಾದಂಗಳವರ ನೇತೃತ್ವದಲ್ಲಿ ನಡೆದ ಮಂಡಲೋತ್ಸವದ ಅಷ್ಟಾವಧಾನ ಸೇವೆಯಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿದರು.


  ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಸುತ್ತು ಉತ್ಸವದ ಬಳಿಕ ದೇವಳದ ಆವರಣದಲ್ಲಿಯೇ ನಿಮಿಷಾ ಶೆಣೈ ಭರತನಾಟ್ಯ ಸೇವೆಯನ್ನು ದೇವರಿಗೆ ಸಮರ್ಪಿಸಿದರು. ನಿಮಿಷಾ ಶೆಣೈ ಅವರು ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಸುಮನಾ ಶೆಣೈ ಅವರ ಪುತ್ರಿ. ಗಾನನೃತ್ಯ ಅಕಾಡೆಮಿಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣಯವರ ಬಳಿ ನೃತ್ಯ ಅಧ್ಯಯನದಲ್ಲಿ ತೊಡಗಿದ್ದು ಸೀನಿಯರ್ ಮುಗಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply