UDUPI
ಜನತೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ : ಸಚಿವ ಪ್ರಮೋದ್ ಮಧ್ವರಾಜ್
ಜನತೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ : ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ, ನವೆಂಬರ್ 15 : ಜನರಿಗೆ ಅನುಕೂಲವಾಗುವಂತೆ ಎಲ್ಲಾ ಸೇವೆಗಳು ಉಚಿತವಾಗಿ ಒಂದೇ ಸೂರಿನಡಿ ಸಿಗಬೇಕು ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಉಡುಪಿಯ ಕುಕ್ಕಿಕಟ್ಟೆಯಲ್ಲಿ ಕರ್ನಾಟಕ ಒನ್ ಸೆಂಟರ್‍ನನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಸರಕಾರದ ವಿವಿಧ ಸೇವೆಗಳನ್ನು ಪಡೆಯಲು, ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ,
ಅವರಿಗೆ ಎಲ್ಲಾ ಸೇವೆಗಳು ಒಂದೇ ಕಟ್ಟಡದಲ್ಲಿ ಉಚಿತವಾಗಿ ಸೇವೆ ಸಿಗುವ ದೃಷ್ಣಿಯಿಂದ ಕರ್ನಾಟಕ ಒನ್ ಯೋಜನೆ ಜಾರಿಗೆ ತರಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಒಂದು ಕಡೆ ಸೆಂಟರ್ ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನು ನಾಲ್ಕು ಕಡೆ ಈ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಸಚಿವರು ಹೇಳಿದರು.ಕಾರ್ಯಕ್ರಮದಲ್ಲಿ ನಗರ ಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್,
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ, ನಗರಸಭೆ ಸದಸ್ಯ ಶಾಂತರಾಮ್ ಸಾಲ್ವಂಕರ್ ಮತ್ತಿತರರು ಉಪಸ್ಥಿತರಿದ್ದರು
ಕರ್ನಾಟಕ ಒನ್ ಯೋಜನೆಯಲ್ಲಿ ಹಲವಾರ ಸೇವೆಗಳು ಲಭಿಸುತ್ತಿದ್ದು, ವಿದ್ಯುತ್ ಬಿಲ್ ಪಾವತಿ, ನಗರ ಸಭೆ ನೀರಿನ ಶುಲ್ಕ, ಮನೆ ತೆರಿಗೆ, ಅಕ್ರಮ ಸಕ್ರಮ 94ಸಿಸಿ ಅರ್ಜಿಗಳ ಸಲ್ಲಿಕೆ,
ಪೊಲೀಸ್ ವೆರಿಫೀಕೇಶ್‍ನ್ ಬಿಲ್, ನರ್ಮ್ ಬಸ್ ಪಾಸ್‍ಗಳು, ಎಸ್. ಎಸ್. ಟಿ ವಿದ್ಯಾರ್ಥಿಗಳಿಗೆ ನರ್ಮ್ ಬಸ್‍ನಲ್ಲಿ ಉಚಿತ ಪ್ರಯಾಣ ಪಾಸ್, ಬಿಎಸ್‍ಎನ್‍ಎಲ್ ಬಿಲ್, ಪಾಸ್‍ಪೋರ್ಟ್ ಅರ್ಜಿ, ಆರ್‍ಟಿಒ ಗೆ ಸಂಬಂಧಿದಂತೆ ಆರ್.ಸಿ, ಡಿ.ಎಲ್‍ಗಳಿಗೆ ಅರ್ಜಿ ಸಲ್ಲಿಕೆ,
ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು, ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಅರ್ಜಿ, ಆಧಾರ್ ಕಾರ್ಡ್ ತಿದ್ದುಪಡಿ, ರೇಶನ್ ಕಾರ್ಡಿಗೆ ಸಂಬಂಧಿಸಿದಂತೆ ಹೊಸ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್‍ಗೆ ಅರ್ಜಿ,
ಆಧಾರ್ ಲಿಂಕ್, ಸೀಮೆಎಣ್ಣೆ ಕೂಪನ್, ರೇಶನ್ ಅಂಗಡಿಯ ಕೂಪನ್, ಸರಕಾರಿ ಇಲಾಖೆಗಳಿಗೆ ಸಂಬಂಧಿಸಿದ ಅಪ್ಲಿಕೇಶ್‍ನ ಫಾರ್ಮ್, ಎಸ್.ಎಲ್.ಸಿ ಅಂಕಪಟ್ಟಿಯ ಕಾಪಿ, ಮರುಮೌಲ್ಯಮಾಪನಕ್ಕೆ ಇಲ್ಲಿ ಅರ್ಜಿ ಸಲ್ಲಿಸಬಹುದು
ಎಸ್‍ಎಲ್‍ಸಿ ಮಾರ್ಕ್ ಕಾರ್ಡ್ ಕೂಡ ಇಲ್ಲಿ ಲಭ್ಯವಾಗುತ್ತದೆ.ಎಲ್‍ಇಡಿ ಬಲ್ಪ್, ಟ್ರಾಫಿಕ್ ಪೊಲೀಸ್ ದಂಡ, ಮಕ್ಕಳನ್ನು ಶಾಲೆಗೆ ಸೇರಿಸಲು ಆರ್‍ಟಿಸಿಟಿಗೆ ಅರ್ಜಿ,
ಪಿಯುಸಿ ಮಾರ್ಕ್‍ಕಾರ್ಡ್, ಎರ್‍ಟೆಲ್, ವೊಡಪೋನ್, ರಿಲಾನ್ಸ್, ಎಮ್‍ಟಿಎಸ್, ಐಡಿಯಾ, ನಮಸ್ತೆ ಮೀಡಿಯಾ, ಎಕ್ಸಿಡ್ ಲೈಫ್ ಇನ್ಸೂರೆನ್ಸ್ ಮೊದಲಾದ ಖಾಸಗಿ ಕಂಪೆನಿಗಳ ಬಿಲ್‍ನ್ನು ಕೂಡ ಇಲ್ಲಿ ಪಾವತಿಸಬಹುದು.
You must be logged in to post a comment Login