Connect with us

    LATEST NEWS

    ಕಿನ್ನಿಗೋಳಿ – ತಾಯಿ ಮೇಲೆ ಬಿದ್ದ ಆಟೋವನ್ನು ಎತ್ತಿದ ಪುಟ್ಟ ಬಾಲಕಿ ವಿಡಿಯೋ ವೈರಲ್

    ಮಂಗಳೂರು ಸೆಪ್ಟೆಂಬರ್ 08: ರಸ್ತೆ ದಾಟುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಏಕಾಏಕಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು, ಪರಿಣಾಮ ರಭಸದಿಂದ ಬಂದ ಆಟೋ ಮಹಿಳೆಯ ಮೇಲೆ ಮಗುಚಿ ಬಿದ್ದಿದೆ. ಇದನ್ನು ಕಂಡ ಬಾಲಕಿ ಹೆದರದೇ ತಕ್ಷಣ ತನ್ನ ತಾಯಿಯ ರಕ್ಷಣೆಗೆ ಧಾವಿಸಿದ್ದಾಳೆ. ಕೆಳಗಡೆ ಸಿಲುಕಿದ್ದ ತಾಯಿಯನ್ನು ಉಳಿಸಲು ಬಾಲಕಿ ಆಟೋವನ್ನೇ ಎತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.


    ಕಿನ್ನಿಗೋಳಿಯ ರಾಮನಗರದಲ್ಲಿ ಮಹಿಳೆ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಆಟೋ ನಿಯಂತ್ರಣ ತಪ್ಪಿ ಮಹಿಳೆ ಗುದ್ದಿದೆ. ಅಲ್ಲದೆ ಆಕೆಯ ಮೇಲೆ ಉರುಳಿದೆ. ಈ ವೇಳೆ ರಾಜರತ್ನಪುರ ನಿವಾಸಿ ಚೇತನಾ (35 ವರ್ಷ)ಎನ್ನುವ ಮಹಿಳೆಗೆ ತೀವ್ರಗಾಯವಾಗಿದೆ.

    ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಮಗಳನ್ನು ಕರೆತರಲು ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.

     

    ಇದನ್ನೂ ಓದಿ…

    ಮಂಗಳೂರು : ತಾಯಿಯನ್ನು ರಕ್ಷಿಸಲು ಆಟೋ ರಿಕ್ಷಾವನ್ನೇ ಎತ್ತಿದ  ಧೀರ ಬಾಲಕಿಗೆ ಸಿಎಂ ಸಿದ್ಧರಾಮಯ್ಯ ಪ್ರಶಂಸೆ

    ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಆಟೋ ಎತ್ತಿ ತಾಯಿಯನ್ನು ಮಗಳು ಮೇಲಕ್ಕೆತ್ತಿದ್ದಾಳೆ. ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಬಾಲಕಿ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply