DAKSHINA KANNADA
ಪೋನ್ ಸುಟ್ಟು ಹಾಕಿ ನೇಣಿಗೆ ಶರಣಾದ ಆಟೋ ಡ್ರೈವರ್

ಪುತ್ತೂರು ಎಪ್ರಿಲ್ 09: ರಿಕ್ಷಾ ಡೈವರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಮೊಬೈಲ್ ನ್ನು ಸುಟ್ಟು ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನ ಕೆಯ್ಯೂರು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ವೆಂಕಟ್ರಮಣ ಗೌಡರ ಪುತ್ರ ಶಿವರಾಜ್ (27 ) ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆಗೆ ಮೊದಲು ಮೊಬೈಲ್ ಫೋನ್ ಅನ್ನು ಸುಟ್ಟು ಹಾಕಿ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
