LATEST NEWS
ರೈಲು ಡಿಕ್ಕಿ ಹೊಡೆದು ರಿಕ್ಷಾ ಚಾಲಕನ ಸಾವು

ರೈಲು ಡಿಕ್ಕಿ ಹೊಡೆದು ರಿಕ್ಷಾ ಚಾಲಕನ ಸಾವು
ಮಂಗಳೂರು ಅಗಸ್ಟ್ 23: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕರೊಬ್ಬರು ಮೃತಪಟ್ಟಿರುವ ಘಟನೆ ಹಳೆಯಂಗಡಿ ಸಮೀಪದ ಕೊಪ್ಪಳ ರೈಲ್ವೆ ಮೇಲ್ಸೇತುವೆ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಹಳೆಯಂಗಡಿ ರಿಕ್ಷಾ ಚಾಲಕ ನವೀನ್ ಕರ್ಕಡ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಹಳೆಯಂಗಡಿ ಸಮೀಪದ ಕೊಪ್ಪಳ ಬಳಿ ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭ ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಮತ್ಸ್ಯಗಂಧ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ನವೀನ್ ಕರ್ಕಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೈಲ್ವೆ ಹಳಿಯಲ್ಲಿಯೇ ಬಿದ್ದುಕೊಂಡಿದ್ದ ಮೃತದೇಹವನ್ನು ಕಂಡ ಅದೇ ಹಳಿಯಲ್ಲಿ ಸಾಗುತ್ತಿದ್ದ ಇನ್ನೊಂದು ರೈಲಿನ ಚಾಲಕ ರೈಲು ನಿಲ್ಲಿಸಿ ಸಾರ್ವಜನಿಕರ ಸಹಾಯದಿಂದ ಮೃತದೇಹವನ್ನು ಬದಿಗೆ ಸರಿಸಲಾಯಿತು.
ಇದರಿಂದಾಗಿ ಸ್ಥಳೀಯ ಇಂದಿರಾನಗರ ರೈಲ್ವೆ ಗೇಟಿನಲ್ಲಿ ದೀರ್ಘಕಾಲ ಮುಚ್ಚಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಮುಲ್ಕಿ ಪೋಲಿಸರು, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮುಲ್ಕಿ ಶವಗಾರಕ್ಕೆ ಸಾಗಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.