LATEST NEWS
16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಯುಟ್ಯೂಬ್ ಬ್ಯಾನ್

ಆಸ್ಟ್ರೇಲಿಯಾ ಜುಲೈ 30: ಆಸ್ಟ್ರೇಲಿಯಾ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ವಿಡಿಯೋ ಜಾಲತಾಣ ಯುಟ್ಯೂಬ್ ನ್ನು ಬ್ಯಾನ್ ಮಾಡಿದೆ. ಈ ಮೂಲಕ ಹದಿಹರೆಯದ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನ್ ಮಾಡಿದ ವಿಶ್ವದ ಮೊದಲ ದೇಶವಾಗಿದೆ.
10 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ. 37 ರಷ್ಟು ಮಕ್ಕಳು, ಯಾವುದೇ ಸಾಮಾಜಿಕ ಮಾಧ್ಯಮ ತಾಣಕ್ಕಿಂತ ಹೆಚ್ಚಾಗಿ, YouTube ನಲ್ಲಿ ಹಾನಿಕಾರಕ ವಿಷಯವನ್ನು ನೋಡುತ್ತಿದ್ದಾರೆ ಎಂದು ವರದಿ ಮಾಡಿರುವ ನಂತರ, ಆಸ್ಟ್ರೇಲಿಯಾದ ಇಂಟರ್ನೆಟ್ ಕಾವಲು ಸಂಸ್ಥೆ ಕಳೆದ ತಿಂಗಳು ಸರ್ಕಾರವನ್ನು YouTube ಗೆ ಪ್ರಸ್ತಾವಿತ ವಿನಾಯಿತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿತು.

ಮೆಟಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಟಿಕ್‌ಟಾಕ್‌ನಂತಹ ಇತರ ಸಾಮಾಜಿಕ ಮಾಧ್ಯಮ ಕಂಪನಿಗಳು ಯೂಟ್ಯೂಬ್‌ಗೆ ವಿನಾಯಿತಿ ನೀಡುವುದು ಅನ್ಯಾಯವಾಗುತ್ತದೆ ಎಂದು ವಾದಿಸಿದ್ದವು. ಈ ಹಿನ್ನಲೆ ಇದೀಗ ಆಸ್ಟ್ರೇಲಿಯಾ ಯುಟ್ಯೂಬ್ ನ್ನು ಕೂಡ ಬ್ಯಾನ್ ಮಾಡಿದೆ. ಈ ಮೂಲಕ 16 ವರ್ಷಕ್ಕಿಂತ ಕೆಳಗಿನ ಮಕ್ಕಳು ಯಾವುದೇ ರೀತಿಯ ಯುಟ್ಯೂಬ್ ಚಾನೆಲ್ ಅಥವಾ ಅಕೌಂಟ್ ಅನ್ನು ಹೊಂದುವುದನ್ನು ನಿಷೇಧಿಸಿದೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಫೇಸ್ ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಿಗೆ ಈ ಬ್ಯಾನ್ ಇದೆ.