DAKSHINA KANNADA
ಕಾಡಾನೆ ಕಾರ್ಯಾಚರಣೆ – ಅರಣ್ಯ ಇಲಾಖೆ ಅಧಿಕಾರಿಗಳ ವಾಹನಗಳ ಮೇಲೆ ಸ್ಥಳೀಯರಿಂದ ಕಲ್ಲು ತೂರಾಟ….!!

ಪುತ್ತೂರು ಫೆಬ್ರವರಿ 23: ಇಬ್ಬರನ್ನು ಬಲಿ ಪಡೆದ ನರಹಂತಕ ಕಾಡಾನೆಯನ್ನ ಸೆರೆ ಹಿಡಿದು ತೆರಳುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಮೀನಾಡಿ ಸಮೀಪ ನಡೆದಿದೆ.
ಇಬ್ಬರನ್ನು ಬಲಿ ಪಡೆದಿದ್ದ ಎರಡು ಕಾಡಾನೆಗಳಲ್ಲಿ ಒಂದನ್ನು ಹಿಡಿದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿನ್ನಲೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಡಿವೈಎಸ್ಪಿ, ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಘಟನೆಯಲ್ಲಿ ಎರಡು ಪೋಲಿಸ್ ಜೀಪ್,ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬ್ರೀಝಾ ಕಾರು ಜಖಂ ಗೊಂಡಿದೆ. ಇನ್ನೊಂದು ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.