DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಕ್ರೀಡಾಪಟು ಪೂವಮ್ಮ ಉರುಳು ಸೇವೆ

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಕ್ರೀಡಾಪಟು ಪೂವಮ್ಮ ಉರುಳು ಸೇವೆ
ಪುತ್ತೂರು ಅಕ್ಟೋಬರ್ 14: 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ನೆರವೇರಿಸಿದರು.
ಕಳೆದ ಬಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೂವಮ್ಮ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಪದಕ ಗೆದ್ದರೆ ಉರುಳು ಸೇವೆ ಮಾಡುವ ಹರಕೆ ಹೊತ್ತಿದ್ದರು. ಅದರಂತೆ ಇಂದು ಕುಟುಂಬ ಸದಸ್ಯರೊಂದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೂವಮ್ಮ ಬಳಿಕ ಉರುಳು ಸೇವೆ ಸಲ್ಲಿಸಿ ಹರಕೆ ನೆರವೇರಿಸಿದ್ದಾರೆ.

ಮುಂಬರುವ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿರುವ ಪೂವಮ್ಮ ಕಠಿಣ ಪರಿಶ್ರಮಪಡುತ್ತಿದ್ದು, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.