Connect with us

    LATEST NEWS

    ಶರವೇಗದಲ್ಲಿ ಧರೆಗೆ ಧಾವಿಸುತ್ತಿರುವ ಕ್ಷುದ್ರಗ್ರಹ, ಭೂಮಿಗೆ ಕಾದಿದೆಯಾ ಆಪತ್ತು..!!!?

    ವಾಷಿಂಗ್ಟನ್: ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಭಾರೀ ಬೇಗದಲ್ಲಿ ಚಲಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ತಿಳಿಸಿದ್ದು ಆತಂಕ ಸೃಷ್ಟಿಸಿದೆ.

    2024 ಒಎನ್ ಎಂದು ಹೆಸರಿಸಿರುವ ಈ ಕ್ಷುದ್ರಗ್ರಹ 60 ಅಂತಸ್ತಿನ ಕಟ್ಟಡದಷ್ಟು ಅಥವಾ ಸುಮಾರು 2 ಫುಟ್‍ಬಾಲ್ ಮೈದಾನಗಳ ಗಾತ್ರವನ್ನು ಹೊಂದಿದ್ದು ಗಂಟೆಗೆ 40,235 ಕಿ.ಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದ್ದು ಈ ಬೃಹತ್‌ ಕ್ಷುದ್ರಗ್ರಹ ಏಪ್ರಿಲ್‌ 13, 2029 ರಂದು ಭೂಮಿಯ ಅತೀ ಸಮೀಪದಲ್ಲಿ ಹಾದುಹೋಗಲಿದೆ ಎಂದು ಇಸ್ರೋ ತಿಳಿಸಿದೆ. ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬರೇಟರಿ ಕ್ಷುದ್ರಗ್ರಹದ ಪಥವನ್ನು ನಿಕಟವಾಗಿ ಗಮನಿಸುತ್ತಿದೆ.

    9942 ಅಪೋಫಿಸ್ ಹೆಸರಿನ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ,ಬಾಹ್ಯಾಕಾಶದಲ್ಲಿ ನಡೆಯುವ ಒಂದು ಸಣ್ಣ ಘರ್ಷಣೆ ಕೂಡಾ ಕ್ಷುದ್ರಗ್ರಹದ ಪಥವನ್ನು ಬದಲಾಯಿಸಬಹುದು ಎಂದು ಕೆನಡಾದ ಖಗೋಳಶಾಸ್ತ್ರಜ್ಞ ಪೊಲ್ಲಿ ವೀಗರ್ಟ್ ಅವರ ಹೊಸ ಅಧ್ಯಯನ ಹೇಳಿದೆ.

    99942 ಅಪೋಫಿಸ್ ಅನ್ನು ‘ಗಾಡ್ ಆಫ್ ಚೋಸ್'(God of Chaos) ಎಂದೂ ಕರೆಯುತ್ತಾರೆ.ಪುರಾತನ ಈಜಿಪ್ಟಿನ ಪುರಾಣಗಳಲ್ಲಿ ರಾಕ್ಷಸ ಹಾವಿನಿಂದ ಈ ಹೆಸರು ಬಂದಿದೆ. 99942 ಅಪೋಫಿಸ್ ಅನ್ನು ಮೊದಲು 2004 ರಲ್ಲಿ ಕಂಡುಹಿಡಿಯಲಾಯಿತು.ಇದು ಭೂಮಿಯ ಸಮೀಪವಿರುವ 1,210 ಅಡಿ ಅಗಲದ ಕ್ಷುದ್ರಗ್ರಹವಾಗಿದೆ.ಈ ಬೃಹತ್ ಬಾಹ್ಯಾಕಾಶ ಬಂಡೆಯು ಪ್ರತಿ 7,500 ವರ್ಷಗಳಿಗೊಮ್ಮೆ ಭೂಮಿಯ ಸಮೀಪ ಬರುತ್ತದೆ. 99942 ಅಪೋಫಿಸ್ ಏಪ್ರಿಲ್ 13, 2029 ರಂದು ಭೂಮಿಯ ಮೂಲಕ ಹಾದುಹೋಗುವ ನಿರೀಕ್ಷೆಯಿದೆ.ಈ ಸಂದರ್ಭದಲ್ಲಿ ಅದು ಭೂಮಿಗೆ ಅಪ್ಪಳಿಸಬಹುದು ಎನ್ನುವ ಸಾಧ್ಯತೆಯನ್ನು ತಜ್ಞರು ಆರಂಭದಲ್ಲಿ ತಳ್ಳಿಹಾಕಿದ್ದರು. ಅದರ ಸಂಭವನೀಯತೆ ಕೇವಲ 2.7% ನಲ್ಲಿ ಎಂದಿದ್ದರು.ಕ್ಷುದ್ರಗ್ರಹದ ಮಾರ್ಗ ಸ್ವಲ್ಪಮಟ್ಟಿಗೆ ಬದಲಾದರೂ ಅದು ಭೂಮಿಯ ಕಡೆಗೆ ಹಿಂತಿರುಗುವ ಸಂಭವನೀಯತೆ ತುಂಬಾ ಕಡಿಮೆ. ಅಂದರೆ ಈ ಸಾಧ್ಯತೆ ಕೇವಲ 5% ಎಂದು ವೀಗರ್ಟ್ ಹೊಸ ಅಧ್ಯಯನದಲ್ಲಿ ಹೇಳಿದ್ದಾರೆ.ಅಂದರೆ ದುರಂತದ ಘರ್ಷಣೆಯ ಸಂಭವನೀಯತೆಯು 2 ಶತಕೋಟಿಯಲ್ಲಿ 1 ಕ್ಕಿಂತ ಕಡಿಮೆ ಎನ್ನಲಾಗಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *