DAKSHINA KANNADA
ಉಪ್ಪಿನಂಗಡಿ : ಮಹಿಳೆಯ ಮೇಲೆ ತಂಡದಿಂದ ಹಲ್ಲೆ

ಉಪ್ಪಿನಂಗಡಿ, ಡಿಸೆಂಬರ್ 12: ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಠ ಎಂಬಲ್ಲಿ ಮಹಿಳೆಯ ಮೇಲೆ ತಂಡದಿಂದ ಹಲ್ಲೆ ನಡೆದ ಘಟನೆ ವರದಿಯಾಗಿದೆ.
ಅಬ್ದುಲ್ ರಹಿಮಾನ್ ಎಂಬವರ ಗುಜರಿ ಅಂಗಡಿಗೆ ಬಂದಿದ್ದ ಮಹಿಳೆಯ ಮೇಲೆ ಅಬ್ದುಲ್ ರಹಿಮಾನ್ ನ ಹೆಂಡತಿ ಹಸೀನಾ ಹಾಗು ಚಾಲಕ ಅಫ್ರಿದಿ ಹಲ್ಲೆನಡೆಸಿದ್ದಾರೆ. ಶಹನಾಜ್ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ.

ನನ್ನ ಗಂಡನೊಂದಿಗೆ ನಿನಗೇನು ಕೆಲಸ ಎಂದು ಹಸೀನಾ ಹಾಗು ತಂಡ ಹಲ್ಲೆ ನಡೆಸಿದ್ದಾರೆ. ಕೈ ಮತ್ತು ಪ್ಲಾಸ್ಟಿಕ್ ಪೈಪ್ ನಿಂದ ಹೊಡೆದು ಮಹಿಳೆಗೆ ಹಲ್ಲೆ ನಡೆಸಿದ್ದಾರೆ.
ಇದೀಗ, ಅಬ್ದುಲ್ ರಹಿಮಾನ್ ಹೆಂಡತಿಯ ವಿರುದ್ದವೇ ದೂರು ನೀಡಿದ್ದು,ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.