LATEST NEWS
ಕೋಣದ ಬಾಯಲ್ಲಿ ನೊರೆ ಬರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ.? – ಶಾಸಕ ಅಶೋಕ್ ರೈ ಪ್ರಶ್ನೆ
ಮಂಗಳೂರು ಅಕ್ಟೋಬರ್ 27: ಈ ಬಾರಿ ಬೆಂಗಳೂರು ಕಂಬಳ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಸರಕಾರದಿಂದ ಪರ್ಮಿಷನ್ ಸಿಕ್ಕಿದ್ದು, ಮೈಸೂರು ಮಹಾರಾಣಿಯವರಿಂದ ಅನುಮತಿ ಸಿಗಬೇಕಿದೆ ಎಂದರು.
ಮಂಗಳೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ಬಾರಿ ಬೆಂಗಳೂರು ಕಂಬಳವನ್ನು 9 ಕೋಟಿ ಖರ್ಚಿನಲ್ಲಿ ಮಾಡಿದ್ದೇವೆ. ಈ ಸಲ ಪೇಟಾದವರು ಕೇಸು ಮಾಡಿದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಕಂಬಳ ಮಾಡುತ್ತಾರೆಂದು ಬರೆದು ಕೊಟಿದ್ದಾರೆಂದು ಆಕ್ಷೇಪಿಸಿದ್ದಾರೆ. ಕರಾವಳಿ ಜಿಲ್ಲೆಗಳ ಜನಪದ ಕ್ರೀಡೆಯೆಂದು ಹೇಳಿದ್ದೇವೆ, ಇಲ್ಲಿ ಮಾತ್ರ ಮಾಡುತ್ತೇವೆಂದು ನಾವು ಬರೆದುಕೊಟ್ಟಿಲ್ಲ. ಮಣಿಪುರದ ನೃತ್ಯವನ್ನು ಮಣಿಪುರದಲ್ಲಿ ಮಾತ್ರ ಮಾಡಬೇಕೆನ್ನುವುದು ಸರಿಯಲ್ಲ. ಬೇರೆ ಕಡೆ ಮಾಡಬಾರದೇ ಎಂಬ ಪ್ರಶ್ನೆ ಬರುತ್ತದೆ. ಇನ್ನು ಕೋಣದ ಬಾಯಲ್ಲಿ ನೊರೆ ಬರುತ್ತದೆ ಎಂದು ಆಕ್ಷೇಪಿಸಿದ್ದಾರೆ. ಕೋಣನ ಬಾಯಲ್ಲಿ ನೊರೆ ಬರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ.? ಇವರಿಗೆ ಅಮೆರಿಕದಿಂದ ದುಡ್ಡು ಬರುತ್ತದೆ, ದೊಡ್ಡ ವಕೀಲರನ್ನು ಇಟ್ಟು ಆಕ್ಷೇಪ ಮಾಡುತ್ತಿದ್ದಾರೆ. ಇವರು ತಾಕತ್ತಿದ್ದರೆ ಒಂದು ಜೊತೆ ಕೋಣವನ್ನು ಒಂದು ತಿಂಗಳು ಸಾಕಿ ನೋಡಲಿ ಎಂದು ಸವಾಲು ಹಾಕಿದರು.