LATEST NEWS
ಲೋಕಸಭೆ ಚುನಾವಣೆ ಮುನ್ನೆಚ್ಚರಿಕಾ ಕ್ರಮವಾಗಿ 19 ಮಂದಿ ರೌಡಿ ಶೀಟರ್ ಗಳಿಗೆ ಗಡಿಪಾರು ಆದೇಶ
ಮಂಗಳೂರು ಮಾರ್ಚ್ 19: ಲೋಕಸಭೆ ಚುನಾವಣೆ ಮುನ್ನೆಚ್ಚರಿಕೆ ಕ್ರಮವಾಗಿ 19 ಮಂದಿ ರೌಡಿಶೀಟರ್ ಗಳನ್ನು ಗಡಿಪಾರು ಮಾಡಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶಿಸಿದ್ದಾರೆ.
ಸಭಾ ಚುನಾವಣೆಯಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ದ ಕಳೆದ ಎರಡು ದಿನಗಳಲ್ಲಿ 19 ರೌಡಿ ಶೀಟರ್‌ಗಳ ವಿರುದ್ಧ ಗಡಿಪಾರು ಮಾಡಲಾಗಿದೆ. ಇದು ಹೆಚ್ಚುವರಿಯಾಗಿ 7 ಜನರ ವಿರುದ್ಧ ಈ ತಿಂಗಳ ಆರಂಭದಲ್ಲಿ ಆದೇಶಗಳನ್ನು ಹೊರಡಿಸಲಾಗಿದೆ.
ಮೂಡುಬಿದಿರೆಯ ಅತ್ತೂರು ನಸೀಬ್ (40), ಕಾಟಿಪಳ್ಳದ ಶ್ರೀನಿವಾಸ್ ಎಚ್. (24), ಬಜ್ಪೆ ಶಾಂತಿಗುಡ್ಡದ ಸಫ್ವಾನ್ (28), ಬೋಂದೆಲ್‌ನ ಜಯೇಶ್ ಯಾನೆ ಸಾಚು (28), ನೀರುಮಾರ್ಗದ ಭಟ್ರಕೋಡಿಯ ವರುಣ್ ಪೂಜಾರಿ (30), ಅಶೋಕ ನಗರದ ಅಝೀಝ್ (40), ಕಾವೂರಿನ ಇಶಾಮ್ (30), ಸುರತ್ಕಲ್ ಇಡ್ಯಾದ ಕಾರ್ತಿಕ್ ಶೆಟ್ಟಿ (28), ಕೈಕಂಬ-ಗಣೇಶ್‌ಪುರದ ದೀಕ್ಷಿತ್ ಪೂಜಾರಿ (23), ಕೃಷ್ಣಾಪುರದ ಲಕ್ಷ್ಮೀಶ ಉಳ್ಳಾಲ (27),ಬೊಂಡಂತಿಲದ ಕಿಶೋರ್ ಸನಿಲ್ (36), ಉಳ್ಳಾಲ ಕೋಡಿಯ ಹಸೈನಾರ್ ಅಲಿ (38), ಕುದ್ರೋಳಿ ಕರ್ಬಲಾ ರಸ್ತೆಯ ಅಬ್ದುಲ್ ಜಲೀಲ್ (28), ಬೋಳೂರಿನ ರೋಶನ್ ಕಿಣಿ (18), ಕಸಬಾ ಬೆಂಗರೆಯ ಅಹ್ಮದ್ ಸಿನಾನ್ (21), ಜಪ್ಪಿನಮೊಗರಿನ ದಿತೇಶ್ ಕುಮಾರ್ (28), ಬಜಾಲ್ ಕುತ್ತಡ್ಕದ ಗುರುಪ್ರಸಾದ್ (38) ಮತ್ತು ಭರತ್ ಪೂಜಾರಿ (31), ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (37) ಗಡಿಪಾರು ಆದೇಶಕ್ಕೆ ಒಳಗಾದ ರೌಡಿಶೀಟರ್‌ಗಳಾಗಿದ್ದಾರೆ.
ಈ ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಈ ಕ್ರಮ ಜರಗಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ 19 ರೌಡಿ ಶೀಟರ್‌ಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ.