Connect with us

DAKSHINA KANNADA

ಕಲಾವಿದರು ಆರ್ಥಿಕವಾಗಿ ಬಡವರೇ ಹೊರತು ಕಲೆಯಲ್ಲಿ ಅಲ್ಲ – ನಟ ದರ್ಶನ

ಕಲಾವಿದರು ಆರ್ಥಿಕವಾಗಿ ಬಡವರೇ ಹೊರತು ಕಲೆಯಲ್ಲಿ ಅಲ್ಲ – ನಟ ದರ್ಶನ

ಮಂಗಳೂರು ಮೇ 29: ಕಲಾವಿದರು ಆರ್ಥಿಕವಾಗಿ ಮಾತ್ರ ಬಡವರು, ಆದರೆ ಕಲೆಯಲ್ಲಿ ಅವರಿಗಿಂತ ಶ್ರೀಮಂತವಾಗಿರುವವರು ಯಾರೂ ಇಲ್ಲ ಎಂದು ಖ್ಯಾತ ಕನ್ನಡ ನಟ ದರ್ಶನ ತೂಗೂದೀಪ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪ್ರಸಿದ್ಧ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ವಾರ್ಷಿಕ ಸಂಭ್ರಮದ ಮುಖ್ಯ ಅತಿಥಿಯಾಗಿ ನಟ ದರ್ಶನ್ ತೂಗುದೀಪ್ ಭಾಗವಹಿಸಿದರು.

ಮಂಗಳೂರಿನ ಅಡ್ಯಾರ್ ನಲ್ಲಿರುವ ಅಡ್ಯಾರ್ ಗಾರ್ಡಾನ್ ನಲ್ಲಿ “ಪಟ್ಲ ಸಂಭ್ರಮ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ದರ್ಶನ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಕಲಾವಿದರು ಯಾರೂ ಬಡವರಲ್ಲ, ಆರ್ಥಿಕವಾಗಿ ಮಾತ್ರ ಬಡವರಾಗಿರಬಹುದು. ಆದರೆ ಕಲೆಯಲ್ಲಿ ಅವರಷ್ಟು ಶ್ರೀಮಂತರು ಬೇರೆ ಯಾರೂ ಇರೋಲ್ಲ ಎಂದು ಹೇಳಿದ್ದಾರೆ.

100 ಕಲಾವಿದರಲ್ಲಿ ಎಲ್ಲರೂ ಕಷ್ಟಪಡುತ್ತಾರೆ, ಆದರೆ ಐದು ಜನರಿಗೆ ಮಾತ್ರ ಅದೃಷ್ಟ ಸಿಗುತ್ತದೆ. ಕಲಾವಿದರು ಮನೆಯಲ್ಲಿ ಬಡತನದಿಂದ ಅಳುತ್ತಿದ್ದರೂ, ಹೊರಗೆ ಬಂದು ಜನರನ್ನು ನಗಿಸುತ್ತಾರೆ. ಅದಕ್ಕಾಗಿಯೇ ಕಲಾವಿದರು ಶ್ರೀಮಂತರು ಎಂದು ಹೇಳಿ ನೆರೆದ ಕಲಾವಿದರನ್ನು ಪ್ರೋತ್ಸಾಹಿಸಿ ದರ್ಶನ್ ಮಾತನಾಡಿದರು.

ಪಟ್ಲ ಸಂಭ್ರಮದಲ್ಲಿ ಟ್ರಸ್ಟ್‍ನ ವತಿಯಿಂದ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಕುಬಣೂರು ಶ್ರೀಧರ್ ರಾವ್ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದ್ದು. ಇತರೆ ಬಡ ಯಕ್ಷಗಾನ ಕಲಾವಿದರಿಗೆ ಸಹಾಯಧನ, ವೈದ್ಯಕೀಯ ಚಿಕಿತ್ಸೆಗೆ ನೆರವು, ಗೃಹ ನಿರ್ಮಾಣಕ್ಕೆ ನೆರವು ನೀಡಲಾಯಿತು. ಜೊತೆಗೆ ಒಂದು ಲಕ್ಷ ನಗದು ನೀಡಿ ಹಿರಿಯ ಯಕ್ಷಗಾನ ಪ್ರಸಂಗಕರ್ತ ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *