Connect with us

    LATEST NEWS

    ಇಬ್ಬರು ಉಗ್ರರ ಬಲಿಪಡೆದಿದ್ದ ಸೇನೆಯ ಶ್ವಾನ ಝೂಮ್ ಇನ್ನಿಲ್ಲ….!!

    ಶ್ರೀನಗರ ಅಕ್ಟೋಬರ್ 13: ಉಗ್ರರ ಜೊತೆಗಿನ ಸೇನೆಯ ಹೋರಾಟದ ಸಂದರ್ಭ ಗಾಯಗೊಂಡಿದ್ದ ಸೇನೆಯ ಶ್ವಾನ ಝೂಮ್ ಮೃತಪಟ್ಟಿದೆ.


    ಅನಂತ್ ನಾಗ್ ಜಿಲ್ಲೆಯ ಕೊಕೆರ್‌ ನಾಗ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡು ತಗುಲಿ ಶ್ವಾನ ಗಾಯಗೊಂಡಿತ್ತು, ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಶ್ವಾನವು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.


    ಉಗ್ರ ನಡುವೆ ನಡೆದ ಕಾದಾಟದಲ್ಲಿ ಝೂಮ್‌ಗೆ ಎರಡು ಗುಂಡು ತಗುಲಿದ್ದವು. ಗಾಯದ ಬಳಿಕವೂ ತನ್ನ ಕೆಲಸದಲ್ಲಿ ನಿರತವಾಗಿದ್ದ ಶ್ವಾನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗೆ ನೆರವಾಗಿತ್ತು ಎಂದು ಸೇನೆ ತಿಳಿಸಿದೆ. ಮೃತಪಟ್ಟ ಶ್ವಾನವು ಸೇನೆಯ ಉಗ್ರರ ವಿರುದ್ಧದ ಕಾರ್ಯಾಚರಣೆ ತಂಡದಲ್ಲಿತ್ತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್ ಇ ತಯ್ಯಬಾ ಉಗ್ರರನ್ನು ಸೇನೆ ಕೊಂದಿತ್ತು. ಶ್ವಾನದ ಜೊತೆಗೆ ಇಬ್ಬರು ಯೋಧರು ಗಾಯಗೊಂಡಿದ್ದರು

    Share Information
    Advertisement
    Click to comment

    You must be logged in to post a comment Login

    Leave a Reply