LATEST NEWS
ಪ್ರೇಯಸಿಯೊಂದಿಗೆ ವಾಗ್ವಾದ, ಉಡುಪಿಯಲ್ಲಿ ಅರ್ಧದಾರಿಯಲ್ಲಿ ಬಸ್ ಬಿಟ್ಟು ಇಳಿದು ಹೋದ ಬಸ್ ಡ್ರೈವರ್ ..!

ಉಡುಪಿ : ಬಸ್ ಹತ್ತಿದ್ದ ಪ್ರೇಯಸಿಯೊಂದಿಗೆ ವಾಗ್ದಾದಕ್ಕಿಳಿದ ಬಸ್ ಡ್ರೈವರ್ ಬಸ್ಸನ್ನು ಅರ್ಧದಲ್ಲೇ ನಿಲ್ಲಿಸಿ ಇಳಿದು ಹೋದ ವಿಚಿತ್ರ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಗುರುವಾರ ಈ ಘಟನೆ ನಡೆದಿದೆ. ನಿಟ್ಟೂರಿನಲ್ಲಿ ಬಸ್ ಹತ್ತಿದ್ದ ಚಾಲಕನ ಪ್ರೇಯಸಿಯೊಂದಿಗೆ ಮಾತಿನ ಚಕಮಕಿ ಆರಂಭವಾಗಿದೆ. ಇಬ್ಬರ ವಾಗ್ವಾದದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದು ಇವರ ಅವಾಂತರ ಕಂಡ ಕಂಡಕ್ಟರ್ ಮಧ್ಯೆ ಬಂದು ಇವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿಫಲವಾಯಿತು. ವಾಗ್ವಾದ ಏರುತ್ತಲೇ ಚಾಲಕ ಏಕಾಏಕಿ ಬಸ್ಸನ್ನು ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ನಿಲ್ಲಿಸಿ, ಬಸ್ಸಿನಿಂದ ಇಳಿದು ಹೊರಟುಹೋಗಿದ್ದಾನೆ. ಆತನ ಬೆನ್ನಲ್ಲೇ ಪೇಯಸಿಯೂ ಬಸ್ಸಿನಿಂದ ಇಳಿದು ಹೋಗಿದ್ದಾಳೆ. ಬಸ್ಸನ್ನು ಅರ್ಧಲ್ಲೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಳಿಕ ಬಸ್ ಕಂಡಕ್ಟರ್ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
