KARNATAKA
ಅಡಿಕೆ ಕದಿಯಲು ಮರವನ್ನೇ ಕಟ್ ಮಾಡುತ್ತಿದ್ದ ಕಳ್ಳನಿಗೆ ಬಿತ್ತು ಧರ್ಮದೇಟು

ಚಿಕ್ಕಮಗಳೂರು – ಅಡಿಕೆ ಕದಿಯಲು ಅಡಿಕೆ ಮರವನ್ನೆ ಕಡಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಸ್ಥಳೀಯರೆ ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಈತ ಬಾಳೆಹೊನ್ನೂರಿನಲ್ಲಿ ಹಲವು ದಿನಗಳಿಂದ ಅಡಿಕೆ ಕಳ್ಳತನ ಮಾಡುತ್ತಿದ್ದ. ಅಡಿಕೆಗಳನ್ನು ಕದಿಯಲು ಮರಗಳನ್ನೇ ಕಡಿಯುತ್ತಿದ್ದ. ತೋಟದ ಮಾಲೀಕರು ಮರಗಳು ಧರೆಗುರುಳಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರೋಪಿಯನ್ನು ಸ್ಥಳೀಯರು ಹಿಡಿದು ಬಾಳೆಹೊನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ
