DAKSHINA KANNADA
ಅಡಿಕೆ ಖರೀದಿ ಪ್ರಾರಂಭಿಸಿದ ಕ್ಯಾಂಪ್ಕೋ

ಅಡಿಕೆ ಖರೀದಿ ಪ್ರಾರಂಭಿಸಿದ ಕ್ಯಾಂಪ್ಕೋ
ಪುತ್ತೂರು ಎಪ್ರಿಲ್ 13: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಅಡಿಕೆ ಖರೀದಿ ವ್ಯವಸ್ಥೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಆರಂಭಗೊಂಡಿದೆ.
ಜಿಲ್ಲೆಯ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯನ್ನು ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದು, ಇದೀಗ ಅಡಿಕೆ ಖರೀದಿ ಆರಂಭದಿಂದಾಗಿ ಜನ ಕೊಂಚ ಸಮಾಧಾನಗೊಂಡಿದ್ದಾರೆ.

ಅಡಿಕೆ ಖರೀದಿಯ ಪ್ರಮುಖ ಸಂಸ್ಥೆಯಾದ ಕ್ಯಾಂಪ್ಕೋ ಮೂಲಕವೇ ಈ ಖರೀದಿ ನಡೆಯುತ್ತಿದ್ದು, ದಿನಕ್ಕೆ 20 ಟೋಕನ್ ಗಳನ್ನು ನೀಡಲಾಗುತ್ತಿದ್ದು, ಟೋಕನ್ ಹೊಂದಿದ ಕೃಷಿಕರಿಂದ ಮಾತ್ರ ಅಡಿಕೆ ಖರೀದಿ ಮಾಡಲಾಗುತ್ತಿದೆ. ಪ್ರತಿ ಕೃಷಿಕನಿಂದ ಹೊಸ ಅಡಿಕೆಯಾದಲ್ಲಿ 1 ಕ್ವಿಂಟಾಲ್, ಹಳೆ ಅಡಿಕೆಯಾದಲ್ಲಿ 90 ಕಿಲೋ ಅಡಿಕೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.