LATEST NEWS
ರಂಗ ಕಲಾವಿದ ಅರವಿಂದ್ ಬೋಳಾರ್ ಗೆ ಅಪಘಾತ – ಆಸ್ಪತ್ರೆಗೆ ದಾಖಲು

ಮಂಗಳೂರು ಜನವರಿ 30: ಖ್ಯಾತ ರಂಗಕಲಾವಿದ ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಅರವಿಂದ್ ಬೋಳಾರ್ ಅವರಿಗೆ ಪಂಪ್ ವೆಲ್ ಬಳಿ ಅಪಘಾತವಾಗಿದೆ.
ಪಂಪ್ ವೆಲ್ ಬಳಿ ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಬಸ್ಸೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದು, ಬೈಕ್ ಸ್ಕಿಡ್ ಆದ ಪರಿಣಾಮ ಬೋಳಾರ್ ಕೆಳಗೆ ಬಿದ್ದಿದ್ದು, ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading