DAKSHINA KANNADA
ಮುಂದಿನ ಚುನಾವಣೆಯಲ್ಲಿ ಸೋಲಿನ ಭಯಕ್ಕೆ ವಿರೋಧ ಪಕ್ಷಗಳು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿವೆ
ಪುತ್ತೂರು ಡಿಸೆಂಬರ್ 25: ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ವಿರೋಧ ಪಕ್ಷಗಳು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಪುತ್ತೂರಿನಲ್ಲಿ ನಡೆದ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನಲ್ಲಿ ಜೆಡಿಎಸ್ ನ ಹಿರಿಯ ಶಾಸಕರೊಬ್ಬರು ಇದೇ ಮಾತನ್ನು ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿ 16 ಸಾವಿರ ಹಿಂದೂಗಳನ್ನು ಮತಾಂತರ ಮಾಡಲಾಗಿದೆ.
ಅದೇ ರೀತಿ ಇಂದು ಕ್ರಿಸ್ಮಸ್ ಆಚರಣೆಗಾಗಿ 15 ಕಡೆಗಳಲ್ಲಿ ಆಹ್ವಾನಿಸಿದ್ದಾರೆ. ಈ ರೀತಿಯ ಪರಿಸ್ಥಿತಿಯಿರುವಾಗ ತಾನು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿದರೆ ಮುಂದಿನ ಚುನಾವಣೆಯಲ್ಲಿ ತನಗೆ ತೊಂದರೆಯಾಗಲಿದೆ ಎಂದಿದ್ದಾರೆ. ನಮಗೆ ಮುಂದಿನ ಚುನಾವಣೆ ಮುಖ್ಯವಲ್ಲ , ದೇಶದ ಮುಂದಿನ ಭವಿಷ್ಯ ಮುಖ್ಯ ಎಂದ ಸಚಿವರು ಧರ್ಮ ರಕ್ಷಣೆಗಾಗಿ ಈ ಕಾಯ್ದೆ ಅನಿವಾರ್ಯ ಎಂದರು.