BELTHANGADI
ಬಾಲಕಿಯ ಕಣ್ಣಿನಿಂದ ಹೊರ ಬರುತ್ತಿರುವ ಇರುವೆಗಳು
ಬಾಲಕಿಯ ಕಣ್ಣಿನಿಂದ ಹೊರ ಬರುತ್ತಿರುವ ಇರುವೆಗಳು
ಮಂಗಳೂರು ಮಾರ್ಚ್ 7: ವಿಧ್ಯಾರ್ಥಿನಿಯೊಬ್ಬಳ ಕಣ್ಣಿನಿಂದ ಇರುವೆಗಳು ಹೊರಬರುತ್ತಿರುವ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನೆಲ್ಲಿಂಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯ ಓದುತ್ತಿರುವ ವಿಧ್ಯಾರ್ಥಿನಿ ಕಣ್ಣಿನಿಂದ ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸುಮಾರು ಐದಾರು ಇರುವೆಗಳು ಉದುರುತ್ತಿವೆ ಎಂದು ಹೇಳಲಾಗಿದೆ.
ಮನೆಯವರು ವಿಧ್ಯಾರ್ಥಿನಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದಾಗ ರಾತ್ರಿ ವೇಳೆಯಲ್ಲಿ ಕಿವಿಯ ಮೂಲಕ ಇರುವೆಗಳು ಒಳ ಪ್ರವೇಶಿಸಿರಬೇಕೆಂದು ತಿಳಿಸಿ ಕಣ್ಣಿಗೆ ಔಷದ ನೀಡಿದ್ದರು. ಆದರೂ ಕೂಡ ಕಣ್ಣಿನಿಂದ ಇರುವೆಗಳು ಉದುರುವುದು ಮಾತ್ರ ನಿಂತಿಲ್ಲ. ಈ ನಡುವೆ ಶಾಲೆಯ ಶಿಕ್ಷಕರು ಸೋಮವಾರ ಬಾಲಕಿಯನ್ನು ಮೂಡಬಿದಿರೆ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು, ಪರೀಕ್ಷೆ ನಡೆಸಿದ ವೈದ್ಯರು ಇರುವೆ ಬರುವುದನ್ನು ವೀಕ್ಷಿಸದೇ ಎನನ್ನೂ ಹೇಳಲಾಗದು ಎಂದು ವೈದ್ಯರು ತಿಳಿಸಿದ್ದಾರೆ.
ಕಣ್ಣಿನಲ್ಲಿ ಕಲ್ಲುಗಳು ಉದುರುತ್ತವೆ ಎಂದು ಕೇಳಿದ್ದೇವೆ ಆದರೆ ಈ ಬಾಲಕಿಯ ಕಣ್ಣುಗಳಿಂದ ಇರುವೆ ಬರುವುದು ಮಾತ್ರ ವಿಚಿತ್ರವೇ ಆಗಿದೆ. ಇಲ್ಲಿಯವರೆಗೆ ಸುಮಾರು 50 ಇರುವೆಗಳು ಕಣ್ಣಿನಿಂದ ಹೊರಬಂದಿದೆ ಎಂದು ಹೇಳಲಾಗಿದ್ದು, ವೈದ್ಯರು ಇರುವೆ ಕಣ್ಣಿನಿಂದ ಬರುವುದನ್ನು ನೋಡದೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.