FILM
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ಕರೊನಾಗೆ ನಿರ್ಮಾಪಕ ಚಂದ್ರಶೇಖರ್ ಬಲಿ

ಬೆಂಗಳೂರು, ಎಪ್ರಿಲ್ 29: ಕನ್ನಡ ಚಿತ್ರರಂಗಕ್ಕೆ ಮಹಾಮಾರಿ ಕರೊನಾ ವೈರಸ್ ತೀವ್ರವಾಗಿ ಕಾಡುತ್ತಿದೆ. ಮೊನ್ನೆಯಷ್ಟೇ ನಟಿ ಮಾಲಾಶ್ರೀ ಪತಿ ಹಾಗೂ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕರೊನಾದಿಂದ ನಿಧನರಾದರು. ಇದೀಗ ಮತ್ತೊಬ್ಬ ನಿರ್ಮಾಪಕ ಕರೊನಾಗೆ ಬಲಿಯಾಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ಮಾಪಕ ಚಂದ್ರಶೇಖರ್ ಕರೊನಾದಿಂದ ನಿಧನರಾಗಿದ್ದಾರೆ. ಚಂದ್ರಶೇಖರ್ ಅವರು ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ ಹಾಗೂ ರನ್ನ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಚಂದ್ರಶೇಖರ್ ಅವರಿಗೆ ಕಳೆದ 23 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗಿತ್ತು. ಕೂಡಲೇ ಅವರನ್ನು ಮಣಿಪಾಲ್ ಸೆಂಟರ್ಗೆ ದಾಖಲಿಸಲಾಗಿತ್ತು. ಕೋವಿಡ್ ವಾಸಿಯಾಗಿತ್ತು ಆದ್ರೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು ಇಂದು ಬೆಳಗಿನಜಾವ ನಿಧನರಾಗಿದ್ದಾರೆ.