LATEST NEWS
ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು…..!!
ಮಂಗಳೂರು ನವೆಂಬರ್ 26: ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರಣಿ ಕೊಲೆ ಹಾಗೂ ಹಲ್ಲೆಗಳಿಂದ ಜಿಲ್ಲೆ ಸುದ್ದಿಯಾಗುತ್ತಿದೆ. ಈ ನಡುವೆ ಮಂಗಳೂರು ನಗರದಲ್ಲಿ ನೆತ್ತರು ಹರಿದಿದೆ. ನಗರದ ಬೊಕ್ಕಪಟ್ಟಣ್ಣದ ಕರ್ನಲ್ ಗಾರ್ಡನ್ ಬಳಿ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ಆಗಿರಬಹುದೆಂದು ಶಂಕಿಸಲಾಗಿದ್ದು ಮೃತ ವ್ಯಕ್ತಿಯನ್ನು ಇಂದ್ರಜೀತ್ (29) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಇಂದ್ರಜಿತ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ. ಈ ಸಂದರ್ಭ ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಹೇಳಲಾಗಿದ್ದು, ಬಳಿಕ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಕರ್ನಲ್ ಗಾರ್ಡನ್ ಬಳಿ ಈತನನ್ನು ಇರಿದು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದ್ದು, ಈ ಹಿಂದೆ ಈತನ ಹತ್ಯೆ ಯತ್ನ ನಡೆದಿತ್ತು .
ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬರ್ಕೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ. .
Facebook Comments
You may like
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
-
ಖಾಸಗಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಆರೆಸ್ಟ್ – ಪೊಲೀಸರ ಎದುರೇ ಕಪಾಳಕ್ಕೆ ಬಾರಿಸಿದ ಯುವತಿ
-
ಆರ್ಥಿಕ ಮುಗ್ಗಟ್ಟಿಗೆ ಯವ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ
-
ನೂತನ ಸಚಿವರಿಗೆ ಖಾತೆ ಹಂಚಿಕೆ..ನೂತನ ಸಚಿವ ಅಂಗಾರರಿಗೆ ಮೀನುಗಾರಿಕೆ
-
ಸಿಟಿಬಸ್ ಚಾಲಕನ ಮೇಲೆ ಸೀಮೆ ಎಣ್ಣೆ ಸುರಿದು ಹಲ್ಲೆ – ಶೀಘ್ರ ಆರೋಪಿಗಳ ಬಂಧನಕ್ಕೆ ಒತ್ತಾಯ
-
ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕರ್ಮಿಗಳ ವಿಕೃತಿ – ಪೊಲೀಸ್ ಆಯುಕ್ತರಿಂದ ಪರಿಶೀಲನೆ
You must be logged in to post a comment Login