BANTWAL
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣ ಯುವತಿ ಮೃತದೇಹ ಪತ್ತೆ ಮುಂದುವರೆದ ಶೋಧಕಾರ್ಯ
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣ ಯುವತಿ ಮೃತದೇಹ ಪತ್ತೆ ಮುಂದುವರೆದ ಶೋಧಕಾರ್ಯ
ಬಂಟ್ವಾಳ ಸೆಪ್ಟೆಂಬರ್ 29: ಕುಟುಂಬ ಸಮೇತ ಬಂಟ್ವಾಳ ಮೂಡ ಗ್ರಾಮದ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಇನೋಳಿ ಕೊರಿಯ ಎಂಬಲ್ಲಿ ಯುವತಿಯೊಬ್ಬಳ ಮೃತ ದೇಹ ಪತ್ತೆಯಾಗಿದೆ.
ಪತಿ ಸಾವಿಗೆ ಮನನೊಂದು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದರು, ನಿನ್ನೆ ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಘಟನೆ ನಡೆದಿದ್ದು, ಸ್ಥಳೀಯರು ಕೂಡಲೇ ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
ಕತ್ತಲೆ ಹಿನ್ನಲೆಯಲ್ಲಿ ಮತ್ತೆ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಇಂದು ಮಗಳು ಕಲ್ಪಿತಾ ಅವರ ಮೃತದೇಹ ಕೊಣಾಜೆ ಇನೋಳಿ ಕೊರಿಯ ಎಂಬಲ್ಲಿ ಪತ್ತೆಯಾಗಿದೆ. ಇನ್ನು ಮಗ ಕೌಶಿಕ್ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರೆದಿದೆ.
ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಿದರು. ಈ ಸಂದರ್ಭದಲ್ಲಿ ನದಿಯಲ್ಲಿ ಮುಳುಗಿದ್ದ ಮಹಿಳೆಯನ್ನು ಮೇಲೆತ್ತಿ ರಕ್ಷಣೆ ಮಾಡಲು ಪ್ರಯತ್ನಿಸಿದ ನಿವಾಸಿಗಳು ತಹಶೀಲ್ದಾರರೊಂದಿಗೆ ಮಾತುಕತೆ ನಡೆಸಿದರು.
ತಾಯಿ ಮಕ್ಕಳೊಂದಿಗೆ ನದಿಗೆ ಹಾರಿದ ಸಾಕು ನಾಯಿ ಪವಾಡ ಸದೃಶವಾಗಿ ಪಾರಾಗಿದ್ದು. ಬಳಿಕ ನಾಯಿಯನ್ನು ರಕ್ಷಣೆ ಮಾಡಿದ ಸ್ಥಳಿಯ ನಾಗರಿಕರು. ಕಂದಾಯ ಇಲಾಖೆ ಹಾಗೂ ಹಾಗೂ ಪೊಲೀಸರೊಂದಿಗೆ ಬಂಟ್ವಾಳ ಸರಕಾರಿ ಪಶು ಆಸ್ಪತ್ರೆಗೆ ಸೇರಿಸಿ ಶುಶ್ರೂಷೆ ನಿಡಲಾಯಿತು.