Connect with us

    LATEST NEWS

    ಶಂಕಿತ ಡೆಂಗ್ಯೂಗೆ ಮತ್ತೊಬ್ಬ ಯುವಕ ಬಲಿ ಜಿಲ್ಲೆ ಮರಣಮೃದಂಗ ಬಾರಿಸುತ್ತಿರುವ ಡೆಂಗ್ಯೂ

    ಶಂಕಿತ ಡೆಂಗ್ಯೂಗೆ ಮತ್ತೊಬ್ಬ ಯುವಕ ಬಲಿ ಜಿಲ್ಲೆ ಮರಣಮೃದಂಗ ಬಾರಿಸುತ್ತಿರುವ ಡೆಂಗ್ಯೂ

    ಮಂಗಳೂರು ಸೆಪ್ಟೆಂಬರ್ 15: ಮಹಾಮಾರಿ ಡೆಂಗ್ಯೂ ತನ್ನ ಬೇಟೆ ಮುಂದುವರೆಸಿದೆ. ಶಂಕಿತ ಡೆಂಗ್ಯೂ ಜ್ವರಕ್ಕೆ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಭಟ್ನಗರ ನಿವಾಸಿ ಹರ್ಷಿತ ಗಟ್ಟಿ ಡೆಂಗ್ಯೂಗೆ ಬಲಿಯಾದ ದುರ್ದೈವಿ. ತೀವ್ರ ಜ್ವರದಿಂದ ಬಳಲುತ್ತಿದ್ದ ಹರ್ಷಿತ್ ಗಟ್ಟಿ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರ್ಷಿತ್ ಮೃತಪಟ್ಟಿದ್ದಾರೆ. ಹರ್ಷಿತ್ ಗಟ್ಟಿಗೆ ಡೆಂಗ್ಯು ಹಾಗೂ ಪ್ಲೇಗ್ ಇದೆ ಎಂದು ಹೇಳಲಾಗಿದೆ. ಹರ್ಷಿತ್ ವೆಲ್ಡರ್ ವೃತ್ತಿಯನ್ನು ನಡೆಸುತ್ತಿದ್ದರು.
    ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ದಿನಗಳ ಅಂತರದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಡೆಂಗ್ಯೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಣಮೃದಂಗವನ್ನೆ ಬಾರಿಸುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *