DAKSHINA KANNADA
ಮಂಗಳೂರು ನಗರಕ್ಕೆ ಮತ್ತೊಂದು ಗಂಡಾಂತರದ : ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತದಿಂದ ಜಲಕ್ಷಾಮ ಭೀತಿ..!
ಈ ಬಾರಿ ಕರಾವಳಿಯಲ್ಲಿ ಕೈಕೊಟ್ಟ ಮಳೆಯಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಕ್ಷಾಮದ ಸೂಚನೆ ಕಂಡುಬಂದಿದೆ.
ಮಂಗಳೂರು : ಈ ಬಾರಿ ಕರಾವಳಿಯಲ್ಲಿ ಕೈಕೊಟ್ಟ ಮಳೆಯಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಕ್ಷಾಮದ ಸೂಚನೆ ಕಂಡುಬಂದಿದೆ.
ಮಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂ ನಲ್ಲಿ ನೀರಿನ ಪ್ರಮಾಣದ ಭಾರಿ ಕುಸಿತ ಕಂಡಿದೆ.
ಡ್ಯಾಂನಲ್ಲಿ ಈಗ 5 ಮೀಟರ್‌ನಷ್ಟು ಮಾತ್ರ ನೀರು ಸಂಗ್ರಹವಿದ್ದು ಎಚ್ಚರಿಕೆಯ ಕರೆ ಘಂಟೆ ಬಾರಿಸಿದೆ. ಕರಾವಳಿಯಲ್ಲಿ ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಅಭಾವ ಸಹಜವಾಗಿಯೇ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿಯೇ ನೀರಿನ ತತ್ವರ ಉಂಟಾಗಿದೆ.
ಇದೇ ರೀತಿ ಕೆಲ ದಿನಗಳಲ್ಲಿ ಮಳೆ ಬಾರದೇ ಹೋದಲ್ಲಿ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವ ಅನಿವಾರ್ಯ ಸಂದಿಗ್ದತೆಯಲ್ಲಿ ಜಿಲ್ಲಾಡಳಿತವಿದೆ. ಮಂಗಳೂರು ನಗರಕ್ಕೆ ನೀರಿನ ಏಕೈಕ ಮೂಲ ನೇತ್ರಾವತಿ ನದಿಯಾಗಿದ್ದು, ಈ ನದಿಗೆ ಬಂಟ್ವಾಳದ ತುಂಬೆಯಲ್ಲಿ ಅಣೆಕಟ್ಟು ಕಟ್ಟಲಾಗಿದೆ ಮತ್ತು ನಗರಕ್ಕೆ ನೀರು ಸರಬರಾಜು ಇಲ್ಲಿಂದಲೇ ಮಾಡಲಾಗುತ್ತದೆ.
8.5 ಮೀಟರ್ ಎತ್ತರದ ಈ ಡ್ಯಾಂ ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗುತ್ತದೆ. ಹೆಚ್ಚುವರಿ ನೀರನ್ನು ಇಲ್ಲಿನ 30 ಗೇಟ್‌ಗಳಲ್ಲಿ ಹೊರಬಿಟ್ಟರೂ ಅಷ್ಟೇ ಪ್ರಮಾಣದ ಒಳ ಹರಿವು ಸ್ವಾಭಾವಿಕವಾಗಿಯೇ ಇರುತ್ತಿತ್ತು.
ಆದ್ರೆ ಈ ಬಾರಿ ಕೊಂಚ ವಿಳಂಬವಾಗಿ ಸುರಿದ ಮುಂಗಾರು ಮಳೆ ಕೆಲವೇ ದಿನಗಳಲ್ಲಿ ಹೇಳ ಹೆಸರಿಲ್ಲದೇ ಮಾಯವಾಗಿದೆ. ಧಾರಾಕಾರವಾಗಿ ಸುರಿಯಬೇಕಿದ್ದ ಮಳೆ ಆಗಸ್ಟ್ ತಿಂಗಳಲ್ಲಿ ದಕ್ಷಿಣ ಕನ್ನಡದಲ್ಲಿ ರಣ ಬಿಸಿಲು ಅಬ್ಬರಿಸುತ್ತಿದೆ.
ಇದರಿಂದ ಸಹಜವಾಗಿಯೇ ನೀರು ಆವಿಯಾಗುತ್ತಾ ನದಿ ಪಾತ್ರಗಳಲ್ಲಿ ನೀರಿನ ಕ್ಷಾಮ ತಲೆದೋರುತ್ತಿದೆ.
ಮುಂದಿನ ದಿನಗಳಲ್ಲಿ ಮಳೆ ಬರುವ ನಿರೀಕ್ಷೆಯಲ್ಲಿದ್ದೇವೆ ಒಂದು ವೇಳೆ ಮಳೆ ಬಾರದೆ ಹೋದ್ರೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಲು ಮಂಗಳೂರು ಪಾಲಿಕೆ ನಿರ್ಧರಿಸಿದೆ.