Connect with us

DAKSHINA KANNADA

ಕರಾವಳಿಯ ಪ್ರವಾಸೋದ್ಯಮಕ್ಕೆ ಮತ್ತೊಂದು ಕೊಡುಗೆ, ಜನಪ್ರತಿನಿಧಿ, ಅಧಿಕಾರಿಗಳನ್ನು ಕೈ ಬೀಸಿ ಕರೆಯುತ್ತಿರುವ ತೋಕೂರು ಹೊಳೆ..!!

ಮಂಗಳೂರು : ಶಿಕ್ಷಣ, ಆಧುನೀಕರಣ, ಸುಸಂಸ್ಖೃತವೆಂದೇ  ವಿಶ್ವ ವಿಖ್ಯಾತಿ ಪಡೆದ ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿದ್ದರೆ, ಅದಕ್ಕೇ ಮೂಲ ಆಧಾರವಾಗಿದ್ದ ಸುತ್ತಮುತ್ತಲ ನದಿ ಕೊಳ್ಳಗಳು ವಿಷಕಾರಿಗಾಗಿ ರೂಪುಗೊಳ್ಳುತ್ತಿರುವುದು ಬಂದರು ನಗರಿಯ  ಜೀವ ಸಂಕುಲಕ್ಕೆ ಮಾರಕವಾಗುತ್ತಿದೆ.

ಇದರಲ್ಲಿ ಒಂದು  ಜೀವನದಿ ಪಲ್ಗುಣಿ. ಒಂದು ಕಾಲಕ್ಕೆ ಸಾವಿರಾರು ಕುಟುಂಬಗಳಿಗೆ ಆಧಾರವಾಗಿದ್ದ ಈ ನದಿ  ಮತ್ತೆ ವಿಷಮಯವಾಗಿ ಮತ್ತೆ ಬದಲಾಗುತ್ತಿದ್ದು ಬೃಹತ್ ಕೈಗಾರಿಕಾ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯದಿಂದ  ಪಲ್ಗುಣಿ ನದಿ ಸೇರುವ ತೋಕೂರು ಹಳ್ಳ ಕೊಳೆತು ನಾರುತ್ತಿದೆ.

ಅಲ್ಪ ವಿರಾಮದ ಬಳಿಕ ಪಲ್ಗುಣಿಯನ್ನು ಸೇರುವ ತೋಕೂರು ಹಳ್ಳಕ್ಕೆ ಜೋಕಟ್ಟೆ ಹಾಗೂ ಬೈಕಂಪಾಡಿ ಕೈಗಾರಿಕಾ ವಲಯದ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ತ್ಯಾಜ್ಯ ಹರಿಯಬಿಡಲಾಗಿದೆ. ರುಚಿಗೋಲ್ಡ್, ಅಧಾನಿ ವಿಲ್ಮರ್ ಯು ಬಿ ಬಿಯರ್, ಟೋಟಲ್ ಗ್ಯಾಸ್, ಫಿಷ್ ಮಿಲ್ ಮುಂತಾದ ಮಧ್ಯಮ ಕೈಗಾರಿಕೆಗಳು ಇರುವ ಭಾಗಾದಿಂದ ಈ ಮಾಲಿನ್ಯ ಕೈಗಾರಿಕಾ ಘಟಕಗಳಿಂದ ಶುದ್ದೀಕರಣ ಇಲ್ಲದೆ ನೇರವಾಗಿ ತೋಕೂರು ಹಳ್ಳ ಸೇರುತ್ತಿದೆ. ತೋಕೋರು, ಕುಡಂಬೂರು, ಜೋಕಟ್ಟೆ ಸಹಿತ ಸುತ್ತಲ ಗ್ರಾಮಗಳ ಅಂತರ್ಜಲ, ಕೃಷಿಯ ಮೂಲ ಆಗಿರುವ ತೋಕೂರು ಹಳ್ಳ ಈಗ ಕೊಳೆತು ಅಸಹ್ಯವಾಗಿ ನಾರುತ್ತಿದೆ. ತೋಕೂರು ಹಳ್ಳದ ಮೂಲಕ ಕೈಗಾರಿಕಾ ತ್ಯಾಜ್ಯ ನೀರು ಜೀವನದಿ ಪಲ್ಗುಣಿಯನ್ನು ಸೇರುತ್ತಿದೆ. ಇದರಿಂದ ಈ ಭಾಗದ ನದಿಯೂ, ನದಿ ದಂಡೆಯ ಜನರಿಗೆ ಬಳಕೆಗೆ ಅಸಾಧ್ಯವಾಗಿದೆ‌.


ಈ ಹಿಂದೆಯೂ ಹಲವು ಭಾರಿ ಇಂತಹದ್ದೇ ಸ್ಥಿತಿ ನಿರ್ಮಾಣಗೊಂಡಿತ್ತು. ಡಿವೈಎಫ್ಐ ಹಾಗೂ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆಗಳನ್ನೂ ಸಂಘಟಿಸಿತ್ತು. ಮಾಧ್ಯಮಗಳಲ್ಲಿ ಇದು ಸುದ್ದಿಯಾಗಿ ಸುಪ್ರೀಂ ಹಸಿರು ಪೀಠ ಸುಮಟೊ ಮೊಕದ್ದಮೆಯನ್ನೂ ದಾಖಲಿಸಿ ತನಿಖೆಗೆ ಆದೇಶಿಸಿತ್ತು. ಈಗ ಮತ್ತೆ ಯಥಾ ಪ್ರಕಾರ ಕೈಗಾರಿಕೆಗಳು ತಮ್ಮ ವಿಷಯುಕ್ತ ಮಾಲಿನ್ಯವನ್ನು ಪಲ್ಗುಣಿಗೆ ಯಾವ ಅಂಜಿಕೆಯೂ ಇಲ್ಲದೆ ಹರಿಯಬಿಟ್ಟಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಮೌನವಾಗಿದೆ.

ಈಗಿನ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಇಂತಹ ಪ್ರಶ್ನೆಗಳ ಕುರಿತು ಸಣ್ಣ ಕಾಳಜಿಯನ್ನೂ ತೋರದಿರುವುದು ಮಾಲಿನ್ಯಕಾರಕ ಕೈಗಾರಿಕೆಗಳು ಯಾರ ಭಯವೂ ಇಲ್ಲದೆ ಇಂತಹ ಅನಾಹುತಗಳನ್ನು ಎಸಗಲು ದೈರ್ಯ ಬಂದಿದೆ ಎಂದು ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅಪಾದಿಸಿದ್ದಾರೆ. ಈಗ ಆಗಿರುವ ಮಾಲಿನ್ಯವನ್ನು ಸರಿಪಡಿಸಲು, ತಪ್ಪಿತಸ್ಥ ಕೈಗಾರಿಕೆಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಕ್ಷಣವೇ ಮುಂದಾಗಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿ ಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ಖಾಲಿ, ಖಾಲಿ..
ಕೈಗಾರಿಕಾ ನಗರ, ಕ್ವಾರಿಗಳು ತುಂಬಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿಶೇಷ ಮಹತ್ವ ಇದೆ. ಕೆಲಸದ ಒತ್ತಡವೂ ಸಾಕಷ್ಟಿದೆ. ನೂರಾರು ಕೈಗಾರಿಕೆಗಳು, ಕ್ವಾರಿಗಳು ಇರುವ ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಬಹುತೇಕ ಹುದ್ದೆಗಳು ಖಾಲಿ ಬಿದ್ದಿವೆ. ಕೇವಲ ಒಂದೆರಡು ಅಧಿಕಾರಿಗಳು ಎಲ್ಲಾ ಜವಾಬ್ದಾರಿ ನಿರ್ವಹಿಸುವ ಅಸಾಧ್ಯ ಸ್ಥಿತಿ ನಿರ್ಮಾಣಗೊಂಡಿದೆ. ಪ್ರಾದೇಶಿಕ ಅಧಿಕಾರಿಯಾಗಿದ್ದ ಡಾ. ರವಿ ಕೆಲಸದ ಒತ್ತಡದ ಮಧ್ಯೆಯೇ ಮೆದುಳು ಆಘಾತಕ್ಕೊಳಗಾಗಿ ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಹುದ್ದೆಗೂ ಸರಕಾರ ಅಧಿಕಾರಿಯನ್ನು ನೇಮಿಸಿಲ್ಲ. ಖಾಲಿ ಹುದ್ಡೆಗಳನ್ನೂ ಭರ್ತಿ ಮಾಡುತ್ತಿಲ್ಲ. ಇರುವ ಒಂದೆರಡು ಅಧಿಕಾರಿಗಳು, ಗುತ್ತಿಗೆ ನೌಕರರನ್ನೇ ಹಗಲು ರಾತ್ರಿ ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದೆ. ಈ ಪರಿಸ್ಥಿತಿ ಶುದ್ದೀಕರಿಸದೆ ವಿಷಕಾರಿ ತ್ಯಾಜ್ಯ ಹರಿಯ ಬಿಡುವ ಕೈಗಾರಿಕೆಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟಿದೆ. ಪಲ್ಗುಣಿ, ತೋಕೋರು ಹಳ್ಳ ಅವಸಾನದತ್ತ ಚಲಿಸುತ್ತಿದೆ.

https://youtu.be/eYef32f4lHM

Share Information
Continue Reading
Advertisement
Click to comment

Leave a Reply

Your email address will not be published. Required fields are marked *