Connect with us

    LATEST NEWS

    ಲಕ್ನೋ: ಭಾರತೀಯ ವಾಯುಪಡೆಯ ಮತ್ತೊಂದು ಯುದ್ದ ವಿಮಾನ MIG 29 ಪತನ..!!

    ಲಕ್ನೋ : ಭಾರತೀಯ ವಾಯುಪಡೆಗೆ ಸೇರಿದ ಮತ್ತೊಂದು ಯುದ್ದ ವಿಮಾನ MiG-29 ಫೈಟರ್ ಜೆಟ್ ಸೋಮವಾರ ಆಗ್ರಾ ಬಳಿ ಪತನಗೊಂಡಿದ್ದು ವಿಮಾನದಲ್ಲಿದ್ದ ಪೈಲೆಟ್  ಮೊದಲೇ ಹೊರಗೆ ಹಾರಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

    IAF ಮಿಗ್ -29 ವಿಮಾನವು ತನ್ನ ದಿನನಿತ್ಯದ ತರಬೇತಿಯ ಸಮಯದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು  ಆಗ್ರಾ ಬಳಿ  ಪತನಗೊಂಡಿದೆ. ಪತನಕ್ಕೂ ಮುನ್ನ ಜನರಿಗೆ, ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಪೈಲೆಟ್ ಎಚ್ಚರ ವಹಿಸಿದ್ದಾರೆ. ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ” ಎಂದ ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 2 ರಂದು ರಾಜಸ್ಥಾನದ ಬಾರ್ಮರ್ ಬಳಿ ಮಿಗ್-29 ಯುದ್ಧ ವಿಮಾನ ಒಂದು ಪತನಗೊಂಡಿತ್ತು.

    Mig -29   1987 ರಲ್ಲಿ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಯಿತು. ಇವುಗಳು ಸಾಪೇಕ್ಷವಾಗಿ ಸುರಕ್ಷಿತ ದಾಖಲೆಯನ್ನು ಹೊಂದಿವೆ. ವರದಿಗಳ ಪ್ರಕಾರ, ಇದು ಜೆಟ್‌ನ ನವೀಕರಿಸಿದ ಆವೃತ್ತಿಯಾದ ಮಿಗ್-29 ಯುಪಿಜಿ. ಆದ್ರೆ ಎರಡು ತಿಂಗಳಲ್ಲಿ ಎರಡನೇ ಮಿಗ್-29 ಅಪಘಾತವಾಗಿದೆ.  ಹಿಂದೆ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ಬಾರ್ಮೆರ್‌ನಲ್ಲಿ ರುಟೀನ್ ರಾತ್ರಿ ಸಾರ್ಟೀಯಲ್ಲಿ ತಾಂತ್ರಿಕ ಸೋರುವಿಕೆ  ಉಂಟಾಗಿ ಮಿಗ್-29 ಅಪಘಾತಕ್ಕೀಡಾಯಿತು. ಪೈಲಟ್ ಸುರಕ್ಷಿತವಾಗಿ ಹೊರ ಹಾರಿದ್ದರು. ಜೆಟ್‌ನಲ್ಲಿ  Zvezda K-36D zero-zero ejection seat ಇದೆ. ಇದನ್ನು ಪ್ರಪಂಚದ ಅತ್ಯುತ್ತಮ ಈಜೆಕ್ಷನ್ ಸೀಟ್‌ಗಳಲ್ಲಿ ಒಂದೆಂದು ಪರಿಗಣಿಸಲಾದೆ.

    Share Information
    Advertisement
    Click to comment

    You must be logged in to post a comment Login

    Leave a Reply