Connect with us

    KARNATAKA

    ಅಂಕೋಲಾ ಗುಡ್ಡ ಕುಸಿತ ಕಾರ್ಯಾಚರಣೆ, 10 ದಿನವೂ ಸಿಗದ ಕೇರಳದ ಟ್ರಕ್ ಚಾಲಕ ಅರ್ಜುನನ ಕುರುಹು..!  

    ಅಂಕೋಲಾ  : ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ 10 ದಿನವೂ ಕಣ್ಣರೆಯಾದವರಿಗೆ ನಡೆದ ಸೇನಾ ಕಾರ್ಯಾಚರಣೆ ಫಲಪ್ರದವಾಗಿಲ್ಲ, ಕೇವಲ ನದಿ ಅಳದಲ್ಲಿ ಹುದುಗಿ ಹೋದ ಲಾರಿ ಕುರುಹು ಮಾತ್ರ ಪತ್ತೆಯಾಗಿದ್ದು ಅದರಲ್ಲಿ ಕಣ್ಣರೆಯಾದ ಕೇರಳದ ಟ್ರಕ್ ಚಾಲಕ ಅರ್ಜುನ್  ಮತ್ತಿತರರ ಬಗ್ಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗಿದೆ.

    ದುರ್ಘಟನೆಯಲ್ಲಿ ಅರ್ಜುನದ ಸಹಿತ ಇನ್ನೂ ಮೂರು ಜನರ ಸುಳಿವು ಸಿಗಬೇಕಾಗಿದ್ದು. ಭೂಸೇನೆ ಮತ್ತು ನೌಕಾದಳ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ  8 ಜನರ ದೇಹಗಳು ಈ ಪಕ್ಕದ ಗಂಗಾವಳಿ ನದಿಯಲ್ಲಿ ಸಿಕ್ಕಿರುವುದರಿಂದ ಆ ಮೂವರ ದೇಹಗಳು ಸಹ ನದಿಯಲ್ಲೇ ಇರಬಹುದೆಂಬ ಅನುಮಾನದಿಂದ ಕಾರ್ಯಾಚರಣೆ  ಮುಂದುವರೆದಿದ್ದು  ದೇಹಗಳ ಪತ್ತೆಗಾಗಿ ಗುರುವಾರ ದೆಹಲಿಯಿಂದ ತರಿಸಲಾಗಿರುವ ಅತ್ಯಾಧುನಿಕ ಡ್ರೋನ್ ಒಂದನ್ನು ಬಳಸಲಾಗುತ್ತಿದೆ.  ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟಲ್ಲಿಜೆಂಟ್ ಅಂಡರ್ ಗ್ರೌಂಡ್ ಬರೀಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ (remote sensing underground buried object detection drone) ಎಂದು ಕರೆಸಿಕೊಳ್ಳುವ ಈ ಅಲ್ಟ್ರಾ ಮಾಡರ್ನ್ ಸಾಧನ ಎರಡೂವರೆ ಕಿಮೀ ಎತ್ತರದಲ್ಲಿ ಹಾರುವ ವಸ್ತುಗಳನ್ನು ಮತ್ತು ನೀರಿನಡಿ 20 ಮೀಟರ್ ಆಳದಲ್ಲಿರುವ ವಸ್ತುಗಳ ಪತ್ತೆ ಮಾಡಿ ಅವುಗಳ ಚಿತ್ರ ಸೆರೆಹಿಡಿಯುತ್ತದೆ.

    ಕುಸಿದ ಗುಡ್ಡ ಹರಿದು ಗಂಗಾವಳಿ ನದಿ ತಳಭಾಗ ಸೇರಿದ್ದ ಅರ್ಜುನ್ ಸಂಚರಿಸುತ್ತಿದ್ದ ಲಾರಿ ಅವಶೇಷ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಖಚಿತ ಪಡಿಸಿದ್ದಾರೆ. ಆದರೆ 25  ಮೀಟರ್ ನಷ್ಟು ನದಿ ಆಳದಲ್ಲಿರುವ  ಕೆಸರು ಮಿಶ್ರಿತ ಟ್ರಕ್ಕನ್ನು ಮೇಲೆತ್ತುವುದು ರಕ್ಷಣಾ ಕಾರ್ಯಪಡೆಗೆ ಬಹುದೊಡ್ಡ ಸವಾಲಾಗಿದ್ದು 600ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

    ಅರ್ಜುನ್  ಬೆಳಗಾವಿಯಿಂದ ಕೋಝಿಕ್ಕೋಡ್‌ಗೆ 40 ಟನ್ ಮರ ತುಂಬಿದ್ದ ಭಾರತ್‌ಬೆಂಜ್ ಟ್ರಕ್ ಅನ್ನು ಅರ್ಜುನ್ ಚಾಲನೆ ಮಾಡುತ್ತಿದ್ದರು.  ಭೂಕುಸಿತ ಸಂಭವಿಸಿದಾಗ ಅರ್ಜುನ್ ಟ್ರಕ್‌ನ ಕ್ಯಾಬಿನ್‌ನಲ್ಲಿ ಮಲಗಿದ್ದರು ಎಂದು ನಂಬಲಾಗಿದೆ. ಹಾಗಿದ್ದಲ್ಲಿ, ಅವನು ವಾಹನದ ಜೊತೆಗೆ ನದಿಯ ಆಳಕ್ಕೆ ಹೋಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನೊಂದು ಮೂಲ ಪ್ರಕಾರ ಇಂಜಿನ್ ಚಾಲನೆಯಲ್ಲಿರುವಾಗ ಅರ್ಜುನ್ ಚಹಾ ಕುಡಿಯಲು ಹೊರಟಿದ್ದ ಈ ಸಂದರ್ಭ ಭೂಕುಸಿತ ಸಂಭವಿಸಿದರೆ, ಅವನು ನದಿಗೆ ಜಾರಿಬೀಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.  ಭೂಕುಸಿತದ ಬಳಿಕ ಶೀರೂರು  ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕ  ಬೆಟ್ಟಗಳಾದ್ಯಂತ ವಿವಿಧ ತಂಡಗಳು ತೀವ್ರ ಶೋಧ ನಡೆಸುತ್ತಿವೆ. ಗಂಗಾವಳಿ ನದಿಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ರಾಡಾರ್‌ಗಳು ಮತ್ತು ಭಾರಿ ಗಾತ್ರದ ಯಂತ್ರಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಮತ್ತು ಫೆರೆಕ್ಸ್ ಲೊಕೇಟರ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಟ್ರಕ್ ಅನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದು ಅದರಲ್ಲಿ ಅರ್ಜುನ ಇದ್ದರೆಯೇ ಎಂಬುವುದು ಖಚಿತವಾಗಿಲ್ಲ.

     

    Share Information
    Advertisement
    Click to comment

    You must be logged in to post a comment Login

    Leave a Reply