LATEST NEWS
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವು ಕಾಡುಪ್ರಾಣಿ ಗಳು ?
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವು ಕಾಡುಪ್ರಾಣಿ ಗಳು ?
ಮಂಗಳೂರು ಆಗಸ್ಟ್ 21 : ದಕ್ಷಿಣಕನ್ನಡ ಜಿಲ್ಲೆಯ ಜೋಡುಪಾಳ, ಮದೆನಾಡು ಪರಿಸರದಲ್ಲಿ ಭಾರೀ ಭೂಕುಸಿತ ಸಂಭವಿಸುವ ರಾತ್ರಿ ಕಾಡು ಪ್ರಾಣಿಗಳೂ ದುರಂತ ಸಂಭವಿಸುವ ಮುನ್ಸೂಚನೆ ನೀಡಿದ್ದವು ಎಂದು ಹೇಳಲಾಗಿದೆ.
ಮದನಾಡು ಹಾಗು ಜೋಡುಪಾಳ ಪರಿಸರದಲ್ಲಿ ಆಗಸ್ಟ್ 16 ಹಾಗು 17 ರಂದು ಕಾಡಾನೆಗಳ ಭಾರೀ ಚಟುವಟಿಕೆ ಕಂಡು ಬಂದಿತ್ತು. ರಾತ್ರಿ ಯೆಲ್ಲಾ ಈ ಕಾಡಾನೆಗಳು ಗೀಳಿಟ್ಟಿವೆ. ಪರಿಸರದ ನಾಯಿಗಳು ಬೆಟ್ಟದ ಕಡೆ ಮುಖಮಾಡಿ ಒಂದೇ ಸಮನೆ ಬೋಗಳು ಆರಂಬಿಸಿದ್ದವು . ಪ್ರಕೃತಿಯ ಸಂಕೀರ್ಣವಾದ ವ್ಯವಸ್ಥೆಯಲ್ಲಾಗುವ ಅಲ್ಲೋಲ ಕಲ್ಲೋಲ ವನ್ನು ಪ್ರಾಣಿ ಗಳು ಮುಂಚೆಯೇ ಗೃಹಿಸುತ್ತವೆ ಎಂಬುದಕ್ಕೆ ಇವು ಸಾಕ್ಷಿ ಎಂದು ಹೇಳಲಾಗುತ್ತಿದೆ.
ಅಲ್ಲದೆ ಭಾರೀ ಭೂ ಕುಸಿತ ಅಂಭವಿಸಿರುವ ಜೋಡುಪಾಳು, ಮದನಾಡು ಪ್ರದೇಶದಲ್ಲಿ 2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು ಕಂಡುಬಂದಿದ್ದು, ಶಿಶಿರ ಎಂಬವರ ತೋಟದಿಂದ ಬೆಟ್ಟದ ಉದ್ದಕ್ಕೂ ಭೂಮಿ ಬಿರುಕು ಬಿಟ್ಟಿತ್ತು. ಇತ್ತೀಚೆಗೆ ಈ ಬಿರುಕು ಹೆಚ್ಚಾಗುತ್ತಾ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿ ಶಿಶಿರ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೆಲದಿನಗಳ ಹಿಂದೆಯೇ ಭೂಮಿ ಕುಸಿಯುವ ಮುನ್ಸೂಚನೆ ನೀಡಿತ್ತೇ ಎನ್ನುವ ಪ್ರಶ್ನೆ ಈಗ ಮೂಡುತ್ತಿದೆ.