LATEST NEWS
ಉರಗ ತಜ್ಞ, ಪ್ರಾಣಿ ಪ್ರಿಯ ಸುಧೀಂದ್ರ ಐತಾಳರ ಶಪತ ಅಂತ್ಯ…!
ಉಡುಪಿ, ಅಕ್ಟೋಬರ್ 9: ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುತ್ತಾರೆ. ಆದ್ರೆ ಇದೇ ಹಾವು ಹಿಡಿಯುವ ಉರಗ ತಜ್ಞರೊಬ್ಬರ ಶಪತ ಹದಿಮೂರು ವರ್ಷಕ್ಕೆ ಕೊನೆಗೊಂಡಿದೆ.
ಉಡುಪಿ ಜಿಲ್ಲೆಯ ಬಹ್ಮಾವರ ತಾಲೂಕಿನ ಸಾಲಿಗ್ರಾಮದ ಪ್ರಾಣಿ ಪ್ರಿಯ ಸುಧೀಂದ್ರ ಐತಾರು, 13 ವರ್ಷಗಳ ಹಿಂದೆ, ತನ್ನ ವಿರುದ್ಧ ದಾಖಲಾದ ಪ್ರಕರಣದಲ್ಲಿ ದೋಷಮುಕ್ತನಾಗುವ ವರೆಗೂ ಕೂದಲು ಗಡ್ಡ ತೆಗೆಯುದಿಲ್ಲ ಅಂತ ಶಪತ ಮಾಡಿದ್ರು. ಸದ್ಯ ಪ್ರಕರಣ ವಜಾಗೊಂಡ ಹಿನ್ನೆಲೆಯಲ್ಲಿ ಕೂದಲು ಗಡ್ಡಕ್ಕೆ ಕತ್ತರಿ ಹಾಕುವ ಮೂಲಕ ದೀರ್ಘಕಾಲದ ಶಪತ ಅಂತ್ಯಗೊಳಿಸಿದ್ದಾರೆ.
ಗುರುನರಸಿಂಹ ದೇಗುಲದ ಬಳಿಯ ತಮ್ಮ ಮನೆಯಲ್ಲಿ ಐತಾಳರು ಪ್ರಾಣಿ ಸಂರಕ್ಷಣಾ ಕೇಂದ್ರ ನಡೆಸುತ್ತಿದ್ದರು. ಇದರಲ್ಲಿ ಅಪರೂಪದ ತಳಿದ ವನ್ಯ ಜೀವಿಗಳನ್ನು ಇರಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಅಂತ ಆರೋಪಿಸಿ ಅರಣ್ಯಧಿಕಾರಿಗಳು ದಾಳಿ ನಡೆಸಿ, ವನ್ಯಜೀವಿಗಳನ್ನು ವಶಪಡಿಸಿ ಕೇಸು ದಾಖಲಿಸಿದ್ದರು.
ಇತ್ತ ಕೋರ್ಟ್ ನಲ್ಲಿ ಐತಾಳರು, ದುರುದ್ದೇಶದಿಂದ ಹೀಗೆ ಮಾಡಿಲ್ಲ. ಅಪಾಯದಿಂದ ರಕ್ಷಣೆ ಮಾಡಿದ್ದೇನೆ ಅಂತ ಐತಾಳರು 13 ವರ್ಷಗಳ ಕಾಲ ಪ್ರತಿಪಾದನೆ ಮಾಡಿದ್ರು .ಇದರ ನಡುವೆ ನಡೆದ ಐತಾಳ ಮದುವೆಗೂ ಗಡ್ಡ ತೆಗೆಯದೇ ಶಪತ ಉಳಿಸಿಕೊಂಡಿದ್ದರು.
ಕೊನೆಗೆ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರತಿವಾದಿಗಳು ಆರೋಪ ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಕರಣ ವಜಾ ಮಾಡಲಾಯಿತು.. ಇದೇ ಖುಷಿಯಲ್ಲಿ 13 ವರ್ಷಗಳ ಶಪತವನ್ನು, ಕೂದಲು ಗಡ್ಡಕ್ಕೆ ಕತ್ತರಿ ಹಾಕಿ ಅಂತ್ಯಗೊಳಿಸಿದ್ದಾರೆ.. ಸದ್ಯ ಉಗರ ತಜ್ಞ ಐತಾಳರು ಸ್ಮಾರ್ಟ್ ಐತಾಳರಾಗಿ ಬದಲಾಗಿದ್ದಾರೆ.