LATEST NEWS
ನಾಡದೋಣಿ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ….!!

ಉಡುಪಿ ಅಗಸ್ಟ್ 10: ಭಾರೀ ಮಳೆಯಿಂದಾಗಿ ಕಡಲ ಅಬ್ಬರಕ್ಕೆ 40ಕ್ಕೂ ಅಧಿಕ ನಾಡದೋಣಿಗಳು ಹಾನಿಗೊಳಗಾದ ಪ್ರದೇಶಕ್ಕೆ ಉಡುಪಿ ಉಸ್ತುವಾರಿ ಸಚಿವ ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಕಳೆದ ವಾರ ಸುರಿದ ಮಳೆ ಹಾಗೂ ಕಡಲ ಅಬ್ಬರಕ್ಕೆ ನಲವತ್ತಕ್ಕೂ ಅಧಿಕ ನಾಡದೋಣಿಗಳಿಗೆ ಹಾನಿಯಾಗಿತ್ತು. ಅಂದಾಜು 3 ಕೋಟಿ ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಲಾಗಿದೆ.

ಇಂದು ಈ ಸ್ಥಳಕ್ಕೆ ಸಚಿವ ಅಂಗಾರ ಹಾಗೂ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ಪರೀಶೀಲನೆ ನಡೆಸಿದರು. ನಷ್ಟ ಪರಿಹಾರದ ಕುರಿತು ಸಮಾಲೋಚನೆ ನಡೆಸಿದ ಸಚಿವ ಅಂಗಾರ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪರಿಹಾರದ ಬಗ್ಗೆ ಮನವಿ ಮಾಡುವುದಾಗಿ ತಿಳಿಸಿದರು.